Thursday, June 4, 2026
Homeಕರಾವಳಿಮಂಗಳೂರು: ಸುರತ್ಕಲ್ ನಲ್ಲಿ ಎಟಿಎಂ ಕೇಂದ್ರಕ್ಕೆ ಜೆಸಿಬಿ ನುಗ್ಗಿಸಿ ದರೋಡೆಗೆ ಯತ್ನ

ಮಂಗಳೂರು: ಸುರತ್ಕಲ್ ನಲ್ಲಿ ಎಟಿಎಂ ಕೇಂದ್ರಕ್ಕೆ ಜೆಸಿಬಿ ನುಗ್ಗಿಸಿ ದರೋಡೆಗೆ ಯತ್ನ

- Advertisement -
- Advertisement -

ಮಂಗಳೂರು: ಎಟಿಎಂ ಕೇಂದ್ರಕ್ಕೆ ಜೆಸಿಬಿ ನುಗ್ಗಿಸಿ ದರೋಡೆಗೆ ಯತ್ನಸಿರುವ ಘಟನೆ ಸುರತ್ಕಲ್‌ ಪೊಲೀಸ್ ಠಾಣಾ‌ ವ್ಯಾಪ್ತಿಯಲ್ಲಿ ನಡೆದಿದೆ.

ಇಲ್ಲಿನ ವಿದ್ಯಾದಾಯಿನಿ ಶಾಲೆಯ ಮುಂಭಾಗದ ಜಯಶ್ರೀ ವಾಣಿಜ್ಯ ಸಂಕೀರ್ಣದಲ್ಲಿರುವ ಸೌತ್ ಇಂಡಿಯನ್ ಬ್ಯಾಂಕ್ ಬ್ರಾಂಚ್‌ನ ಎಟಿಎಂ‌ ಮೆಷಿನ್ ಗೆ ಕಳೆದ ರಾತ್ರಿ ಕಳ್ಳರು ಜೆಸಿಬಿ ಮೂಲಕ ಕನ್ನ ಹಾಕಿದ್ದಾರೆ. ಈ ವೇಳೆ ಎಟಿಎಂನ ಗಾಜು ಪುಡಿಯಾಗುತ್ತಿದ್ದಂತೆಯೇ ಎಮರ್ಜೆನ್ಸಿ ಸೈರನ್ ಮೊಳಗಿದ್ದು, ಕಳ್ಳರು ಜೆಸಿಬಿ ಸಹಿತ ಪರಾರಿಯಾಗಿದ್ದಾರೆ.

ಸದ್ಯ ಕಳ್ಳರ ಚಲನವಲನ ಎಟಿಎಂ ನ ಸಿಸಿ ಟಿವಿಯಲ್ಲಿ ದಾಖಲಾಗಿದ್ದು, ಪೊಲೀಸರು ಸಿಸಿ ಟಿವಿ ದೃಶ್ಯಗಳನ್ನು ಪಡೆದುಕೊಂಡಿದ್ದಾರೆ.

ಸ್ಥಳಕ್ಕೆ ಡಿಸಿಪಿ ದಿನೇಶ್ ಕುಮಾರ್ ಸಹಿತ ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!