Thursday, June 4, 2026
Homeಕರಾವಳಿಮಂಗಳೂರು: ನೆರೆ‌ ಮನೆಯ ಮಹಿಳೆ ಸ್ನಾನ ಮಾಡುವಾಗ ವಿಡಿಯೋ ಮಾಡುತ್ತಿದ್ದಾತನ ಬಂಧನ

ಮಂಗಳೂರು: ನೆರೆ‌ ಮನೆಯ ಮಹಿಳೆ ಸ್ನಾನ ಮಾಡುವಾಗ ವಿಡಿಯೋ ಮಾಡುತ್ತಿದ್ದಾತನ ಬಂಧನ

- Advertisement -
- Advertisement -

ಮಂಗಳೂರು: ನೆರೆ‌ ಮನೆಯ ಮಹಿಳೆ ಸ್ನಾನ ಮಾಡುವಾಗ ವಿಡಿಯೋ ಮಾಡುತ್ತಿದ್ದಾತನನ್ನು ಬಂಧಿಸಿರುವ ಘಟನೆ ಕೆಮ್ರಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಕ್ಷಿಕೆರೆ ಹೊಸಕಾಡು ಎಂಬಲ್ಲಿ ನಡೆದಿದೆ. ಪಕ್ಷಿಕೆರೆ ಹೊಸಕಾಡು ನಿವಾಸಿ ಸುಮಂತ್ ಪೂಜಾರಿ (22) ಬಂಧಿತ.

 ಈತ ಹಿಂದೂ ಜಾಗರಣ ವೇದಿಕೆ ಪಕ್ಷಿಕೆರೆ ಘಟಕದ ಸಕ್ರೀಯ ಕಾರ್ಯಕರ್ತ ಎನ್ನಲಾಗಿದೆ. ಆರೋಪಿ ಸುಮಂತ್ ತನ್ನ ಪಕ್ಕದ ಮಹಿಳೆಯೊಬ್ಬರು ಸ್ನಾನ‌ ಮಾಡುವುದನ್ನು ವೀಡಿಯೊ ಮಾಡುತ್ತಿದ್ದ ಎನ್ನಲಾಗಿದೆ. ಈ ವೇಳೆ ಮೊಬೈಲ್ ಕ್ಯಾಮರಾ ಗಮನಿಸಿದ ಮಹಿಳೆ ಕಿರುಚಾಡಿದ್ದು, ಈ ವೇಳೆ ನೆರೆಮನೆಯವರು ಸುಮಂತ್ ನನ್ನು ಹಿಡಿದು ಧಳಿಸಿದ್ದಾರೆ ಎನ್ನಲಾಗಿದೆ. ಬಳಿಕ ಮುಲ್ಕಿ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಮಹಿಳೆ ಸ್ನಾನ ಮಾಡುವ ವೀಡಿಯೊ ಮಾಡಿದ್ದ ಮೊಬೈಲ್‌ ಸಹಿತ ಆತನನ್ನು ವಶಕ್ಕೆ ಪಡೆದು ಠಾಣೆ ಕರೆದೊಯ್ದಿದ್ದಾರೆ .ಇನ್ನು ಈತನ ಮೊಬೈಲ್ ನಲ್ಲಿ ಇದೇ ರೀತಿಯ ಹಲವು ನಗ್ನ ಚಿತ್ರಗಳಿದ್ದವು ಎನ್ನಲಾಗಿದೆ.

- Advertisement -

Latest News

error: Content is protected !!