Tuesday, June 9, 2026
Homeಕರಾವಳಿಧರ್ಮಸ್ಥಳ ; ಸೌಜನ್ಯ ತಾಯಿ ಹಾಗೂ ಸಹೋದರನ ಮೇಲೆ ಹಲ್ಲೆಗೆ ಯತ್ನ ಪ್ರಕರಣ; ಹಲ್ಲೆಗೆ ಯತ್ನಿಸಿದಾತನ...

ಧರ್ಮಸ್ಥಳ ; ಸೌಜನ್ಯ ತಾಯಿ ಹಾಗೂ ಸಹೋದರನ ಮೇಲೆ ಹಲ್ಲೆಗೆ ಯತ್ನ ಪ್ರಕರಣ; ಹಲ್ಲೆಗೆ ಯತ್ನಿಸಿದಾತನ ವಿರುದ್ಧ ದೂರು ದಾಖಲು

- Advertisement -
- Advertisement -

ಧರ್ಮಸ್ಥಳ: ಉಜಿರೆಯಲ್ಲಿ  ಪ್ರತಿಭಟನಾ ಸಮಾವೇಶದ ವೇಳೆ ದಿವಂಗತ ಸೌಜನ್ಯ ತಾಯಿ ಕುಸುಮಾವತಿ ಹಾಗೂ ಸಹೋದರ ಜಯರಾಮ್ ಮೇಲೆ ಹಲ್ಲೆಗೆ ಯತ್ನಿಸಿದ ಪ್ರಕರಣಕ್ಕೆ ಹಲ್ಲೆಗೆ ಮುಂದಾದ ವ್ಯಕ್ತಿಯ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೌಜನ್ಯ ತಾಯಿ ಕುಸುಮಾವತಿ ಮತ್ತು ಸಹೋದರ ಜಯರಾಮ್ ನೀಡಿದ ದೂರಿನ ಹಿನ್ನೆಲೆ ಎಫ್ಐಆರ್ ದಾಖಲಿಸಲಾಗಿದೆ.

ಉಜಿರೆಯಲ್ಲಿ  ಇಂದು ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿ ಅಖಿಲ ಕರ್ನಾಟಕ ಮಂಜುನಾಥ ಸ್ವಾಮಿ ಭಕ್ತ ವೃಂದದಿಂದ ಭಾರಿ ಪ್ರತಿಭಟನಾ ಸಮಾವೇಶ ಏರ್ಪಡಿಸಲಾಗಿತ್ತು. ಈ ವೇಳೆ ಸೌಜನ್ಯ ತಾಯಿ,, ತಮ್ಮ, ಹಾಗೂ ಸಹೋದರಿಯರು ನ್ಯಾಯ ಕೇಳುವುದಕ್ಕಾಗಿ ಅಲ್ಲಿಗೆ ತೆರಳಿದ್ದರು. ಈ ವೇಳೆ  ಅಲ್ಲಿದ್ದ ವ್ಯಕ್ತಿಯೊಬ್ಬ ಸೌಜನ್ಯ ತಾಯಿ ಹಾಗೂ ತಮ್ಮನ ಮೇಲೆ ಹಲ್ಲೆ ನಡೆಸುವುದಕ್ಕೆ ಮುಂದಾಗಿದ್ದಾನೆ ಈ ಬಗ್ಗೆ ಇದೀಗ ದೂರು ದಾಖಲಾಗಿದೆ.

ವ್ಯಕ್ತಿಯೊಬ್ಬ ತಡೆದು ನಿಲ್ಲಿಸಿ ಮೈಗೆ ಕೈ ಹಾಕಿ ಚೂಡಿದಾರದ ಶಾಲು ಎಳೆದು ಮಾನಕ್ಕೆ ಕುಂದುಂಟು ಮಾಡಿದ್ದಾನೆ ಎಂದು ಸೌಜನ್ಯ ತಾಯಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಅದರಂತೆ ಪ್ರಕರಣ ದಾಖಲಾಗಿದೆ. ಅಲ್ಲದೇ ಮಗ ಜಯರಾಮನಿಗೂ ಹಲ್ಲೆ ಮಾಡಿದ ಬಗ್ಗೆ ದೂರು ದಾಖಲಾಗಿದೆ.

- Advertisement -

Latest News

error: Content is protected !!