Thursday, May 9, 2024
Homeಕರಾವಳಿಕೊಯಿಲಾ ಫಾರ್ಮ್ ನಲ್ಲಿ ಪ್ರವಾಸಿಗರ ಉಪಟಳ : ಜಾನುವಾರಗಳ ಪ್ರಾಣಕ್ಕೆ ಕುತ್ತಾಗುತ್ತಿದೆ ಜನರ ಭೇಟಿ

ಕೊಯಿಲಾ ಫಾರ್ಮ್ ನಲ್ಲಿ ಪ್ರವಾಸಿಗರ ಉಪಟಳ : ಜಾನುವಾರಗಳ ಪ್ರಾಣಕ್ಕೆ ಕುತ್ತಾಗುತ್ತಿದೆ ಜನರ ಭೇಟಿ

spot_img
- Advertisement -
- Advertisement -

ಪುತ್ತೂರು: ಪ್ರಕೃತಿಯ ಸೌಂದರ್ಯವನ್ನು ವರ್ಣಿಸಲು ಪದಗಳೇ ಸಾಕಾಗುವುದಿಲ್ಲ. ಹೌದು ಪ್ರಕೃತಿಯು ರಮಣೀಯ ದೃಶ್ಯಕಾವ್ಯವನ್ನು ಬರೆದ ತಾಣವೊಂದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿದೆ. ಕೊಯಿಲ ಜಾನುವಾರು ಸಂವರ್ಧನಾ ಕೇಂದ್ರದ ಒಳನೋಟ ಇದಾಗಿದ್ದು, ಇಲ್ಲಿಗೆ ಬರುವ ಪ್ರವಾಸಿಗರಿಂದಾಗಿ ಈ ಪ್ರಕೃತಿಯ ಸೌಂದರ್ಯಕ್ಕೆ ಕೊಡಲಿ ಏಟು ಬೀಳುತ್ತಿದೆ. ಕೇಂದ್ರದ ಜಾನುವಾರುಗಳು ಪ್ರವಾಸಿಗರು ಎಲ್ಲೆಂದರಲ್ಲಿ ಎಸೆಯುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತಿಂದು ಸಾವನ್ನಪ್ಪುವ ವಿದ್ಯಮಾನಗಳೂ ನಡೆಯಲಾರಂಭಿಸಿದೆ.

ಉಪ್ಪಿನಂಗಡಿ-ಸುಬ್ರಹ್ಮಣ್ಯ ಸಂಪರ್ಕಿಸುವ ರಸ್ತೆಯ ಕೊಯಿಲಾ ಜಾನುವಾರು ಸಂವರ್ಧನಾ ಕೇಂದ್ರದ ಸುಂದರ ದೃಶ್ಯಗಳನ್ನು ಆಸ್ಪಾದಿಸಲು ಇಲ್ಲಿಗೆ ನೂರಾರು ಸಂಖ್ಯೆಯ ಪ್ರಕೃತಿ ಪ್ರೇಮಿಗಳು ಭೇಟಿ ನೀಡುತ್ತಾರೆ. ಗಗನ ಚುಂಬಿಸುವ ಬೆಟ್ಟಗಳ ನಡುವೆ ಹಸಿರ ಹೊದಿಕೆಯಂತೆ ಕಂಗೊಳಿಸುವ ಈ ಪ್ರದೇಶ ಸಾವಿರಾರು ಸಂಖ್ಯೆಯ ಜಾನುವಾರುಗಳಿಗೆ ಮೇವನ್ನು ಉಣಿಸುತ್ತದೆ. 

ದಕ್ಷಿಣಕನ್ನಡದ ಸ್ವಿಝರ್ ಲ್ಯಾಂಡ್ ಎನ್ನುವ ಹೆಸರಿನಲ್ಲಿ ಈ ಫಾರ್ಮ್ ನ ಸೊಬಗನ್ನು ಸವಿದ ಜನ ಹೇಳಿಕೊಳ್ಳುತ್ತಿದ್ದು, ಇದರಿಂದಾಗಿ ಹೆಚ್ಚಿನ ಜನರ ಬಾಯಲ್ಲಿ ಈ ಹೆಸರಲ್ಲೇ ಗುರುತಿಸಿಕೊಂಡಿದೆ. ಸುಮಾರು 1000 ಎಕರೆ ಭೂ ಭಾಗವನ್ನು ಹೊಂದಿದ್ದ ಈ ಫಾರ್ಮ್ ನಲ್ಲಿ ಇದೀಗ 704 ಎಕರೆ ಜಾಗ ಮಾತ್ರ ಉಳಿದುಕೊಂಡಿದೆ. 257 ಎಕರೆಯನ್ನು ಈ ಫಾರ್ಮ್ ನ ಪಕ್ಕದಲ್ಲೇ ಆರಂಭಗೊಳ್ಳಲಿರುವ ಪಶು ವೈದ್ಯಕೀಯ ಕಾಲೇಜಿಗೆ ನೀಡಲಾಗಿದೆ.

- Advertisement -
spot_img

Latest News

error: Content is protected !!