Thursday, June 25, 2026
Homeಕರಾವಳಿಉಡುಪಿಉಡುಪಿ: ಕಡಲು ಪ್ರಕ್ಷುಬ್ಧಗೊಂಡಿರುವ ಹಿನ್ನೆಲೆ: ಬೀಚ್‌ ಪ್ರವಾಸಕ್ಕೆ ತೆರಳಿದವರಿಗೆ ನಿರಾಸೆ: ನೀರಿಗಿಳಿಯದಂತೆ ಪ್ರವಾಸಿಗರಿಗೆ ಎಚ್ಚರಿಕೆ

ಉಡುಪಿ: ಕಡಲು ಪ್ರಕ್ಷುಬ್ಧಗೊಂಡಿರುವ ಹಿನ್ನೆಲೆ: ಬೀಚ್‌ ಪ್ರವಾಸಕ್ಕೆ ತೆರಳಿದವರಿಗೆ ನಿರಾಸೆ: ನೀರಿಗಿಳಿಯದಂತೆ ಪ್ರವಾಸಿಗರಿಗೆ ಎಚ್ಚರಿಕೆ

- Advertisement -
- Advertisement -

ಉಡುಪಿ: ಮೂರು ದಿನ ಸಾರ್ವತ್ರಿಕ ರಜೆ ಇರುವುದರಿಂದ ಜಿಲ್ಲೆಯಲ್ಲಿ ಪ್ರವಾಸಕ್ಕೆ ಬರುವವರ ಸಂಖ್ಯೆಯೂ ಹೆಚ್ಚಾಗಿದೆ. ಆದ್ರೆ ಬೀಚ್‌ಗೆ ತೆರಳುವವರಿಗೆ ನಿರಾಸೆ ಕಾದಿದೆ.

ಕಡಲು ಪ್ರಕ್ಷುಬ್ಧವಾಗಿರುವುದರಿಂದ ಪ್ರವಾಸಿಗರಿಗೆ ನೀರಿಗಿಳಿಯಲು ಅವಕಾಶವಿಲ್ಲ. ಉಡುಪಿಯ ಕಾಪು, ಪಡುಬಿದ್ರಿ, ಮಲ್ಪೆ, ಮರವಂತೆ ಸಹಿತ ಎಲ್ಲ ಪ್ರಮುಖ ಬೀಚ್‌ಗಳಲ್ಲಿ ಜನರು ನೀರಿಗೆ ಇಳಿಯದಂತೆ ಎಚ್ಚರಿಕೆ ವಹಿಸಲಾಗಿದೆ. ಹೆಚ್ಚಿನ ಕಡೆ ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಹಗ್ಗ ಕಟ್ಟಲಾಗಿದೆ. ಅದನ್ನು ಮೀರಿ ನೀರಿಗೆ ಇಳಿಯುತ್ತೇವೆ ಎಂದು ಹೋದರೆ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಲಾಗಿದೆ.

- Advertisement -

Latest News

error: Content is protected !!