Wednesday, June 24, 2026
Homeಕರಾವಳಿಬೆಂಗಳೂರು ಮೂಲದ ಪ್ರವಾಸಿಗರ ಕಳೆದುಹೋದ ಮೊಬೈಲ್ ಮರಳಿಸಿದ ಟೂರಿಸ್ಟ್ ಪೊಲೀಸ್ ಸಿಬ್ಬಂದಿ

ಬೆಂಗಳೂರು ಮೂಲದ ಪ್ರವಾಸಿಗರ ಕಳೆದುಹೋದ ಮೊಬೈಲ್ ಮರಳಿಸಿದ ಟೂರಿಸ್ಟ್ ಪೊಲೀಸ್ ಸಿಬ್ಬಂದಿ

- Advertisement -
- Advertisement -

ಮಂಗಳೂರು: ಬೆಂಗಳೂರು ಮೂಲದ ಪ್ರವಾಸಿಗರ ಗುಂಪಿನ ಸದಸ್ಯರೊಬ್ಬರ ದುಬಾರಿ ಬೆಲೆಯ ಮೊಬೈಲ್ ತಣ್ಣೀರು ಬಾವಿ ಬೀಚ್‌ ನಲ್ಲಿ ಡಿ. 27ರಂದು ಶನಿವಾರ ಸಂಜೆ ಕಳೆದುಹೋಗಿದ್ದು, ನಂತರದಲ್ಲಿ ವಿಷಯ ತಿಳಿದ ಟೂರಿಸ್ಟ್ ಪೊಲೀಸ್ ಸಿಬ್ಬಂದಿ ರಾಘವೇಂದ್ರ ತಕ್ಷಣವೇ ಕಾರ್ಯಪ್ರವೃತ್ತರಾಗಿ ತನಿಖೆ ನಡೆಸಿ ಮೊಬೈಲನ್ನ ಹುಡುಕಿ ಪ್ರವಾಸಿಗರಿಗೆ ನೀಡಿದ್ದಾರೆ.

ಟೂರಿಸ್ಟ್ ಪೊಲೀಸ್ ಸಿಬ್ಬಂದಿ ರಾಘವೇಂದ್ರ (ಪ್ರವಾಸಿ ಮಿತ್ರ) ಅವರು ತಕ್ಷಣವೇ ಕಾರ್ಯಪ್ರವೃತ್ತರಾಗಿ ತನಿಖೆ ನಡೆಸಿ, ಕೆಲವೇ ಸಮಯದಲ್ಲಿ ಮೊಬೈಲ್ ಮತ್ತೊಬ್ಬರ ಕೈ ಸೇರಿರುವುದನ್ನು ಪತ್ತೆಹಚ್ಚಿ, ಕಳೆದುಕೊಂಡ ಪ್ರವಾಸಿಗರ ಕೈಗೆ ಮೊಬೈಲ್ ಅನ್ನು ಸುರಕ್ಷಿತವಾಗಿ ಹಸ್ತಾಂತರಿಸಿದರು.

ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ರಕ್ಷಣೆ, ಸುರಕ್ಷತೆ ಹಾಗೂ ಆಸ್ತಿಯ ಭದ್ರತೆಗೆ ಅವರು ನೀಡುತ್ತಿರುವ ಸೇವೆ ರಾಜ್ಯಾದ್ಯಂತ ಗಮನ ಸೆಳೆಯುತ್ತಿದ್ದು, ಇದು ಪ್ರವಾಸೋದ್ಯಮ ಇಲಾಖೆಗೆ ಗೌರವ ತಂದಿದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

- Advertisement -

Latest News

error: Content is protected !!