Thursday, July 16, 2026
HomeUncategorizedಉಡುಪಿ: ತ್ರಾಸಿ ಬೀಚ್ ನಲ್ಲಿ ಟೂರಿಸ್ಟ್ ಬೋಟ್ ಪಲ್ಟಿ; ರೈಡರ್ ಕಣ್ಮರೆ

ಉಡುಪಿ: ತ್ರಾಸಿ ಬೀಚ್ ನಲ್ಲಿ ಟೂರಿಸ್ಟ್ ಬೋಟ್ ಪಲ್ಟಿ; ರೈಡರ್ ಕಣ್ಮರೆ

- Advertisement -
- Advertisement -

ಉಡುಪಿ: ಬೈಂದೂರು ತಾಲೂಕಿನ ತ್ರಾಸಿ ಬೀಚ್ ನಲ್ಲಿ ಟೂರಿಸ್ಟ್ ಬೋಟ್ ಪಲ್ಟಿಯಾಗಿ ಅಪಘಾತ ಸಂಭವಿಸಿದೆ.

ಬೋಟ್ ಪಲ್ಟಿಯಾದ ಕಾರಣ ಉತ್ತರ ಕನ್ನಡ ಜಿಲ್ಲೆಯ ಮೂಲದ ಬೋಟ್ ರೈಡರ್ ರವಿದಾಸ್ ಕಣ್ಮರೆಯಾಗಿದ್ದು, ಶೋಧ ಕಾರ್ಯ ನಡೆಸಲಾಗಿದೆ.

ಬೋಟ್ ನಲ್ಲಿದ್ದ ಬೆಂಗಳೂರಿನ ಪ್ರವಾಸಿಗ ಪ್ರಶಾಂತ್ ಲೈಫ್ ಜಾಕೆಟ್ ತೊಟ್ಟಿದ್ದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಾಪತ್ತೆಯಾಗಿರುವ ರೈಡರ್ ರವಿದಾಸ್ ಗಾಗಿ ಗಂಗೊಳ್ಳಿ ಠಾಣೆಯ ಪೊಲೀಸರು, ಕರಾವಳಿ ಕಾವಲು ಪಡೆ ಮತ್ತು ಸ್ಥಳೀಯರಿಂದ ಹುಡುಕಾಟ ನಡೆದಿದೆ.ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಬೋಟ್ ಅಪಘಾತ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!