Saturday, May 18, 2024
Homeಕರಾವಳಿಸಹ್ಯಾದ್ರಿ 'ಆರ್‌ಡಿಎಲ್' ವತಿಯಿಂದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಸ್ವಯಂಚಾಲಿತ ಸ್ಯಾನಿಟೈಸರ್ ಘಟಕಗಳ ವಿತರಣೆ

ಸಹ್ಯಾದ್ರಿ ‘ಆರ್‌ಡಿಎಲ್’ ವತಿಯಿಂದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಸ್ವಯಂಚಾಲಿತ ಸ್ಯಾನಿಟೈಸರ್ ಘಟಕಗಳ ವಿತರಣೆ

spot_img
- Advertisement -
- Advertisement -

ಮಂಗಳೂರು: ಸಹ್ಯಾದ್ರಿ ಆರ್‌ಡಿಎಲ್ ಸಾಮಾಜಿಕ ಜವಾಬ್ದಾರಿ ಯೋಜನೆಯಡಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಸಂವೇದಕ ಆಧಾರಿತ, ಸ್ವಯಂಚಾಲಿತ ಸ್ಯಾನಿಟೈಸರ್ ಘಟಕಗಳ ವಿತರಣೆ ನೆರವೇರಿಸಿದರು.ಈ ಯೋಜನೆಯು ಭಂಡಾರಿ ಫೌಂಡೇಶನ್‌ನ ಟ್ರಸ್ಟಿ ಶ್ರೀ ದೇವದಾಸ್ ಹೆಗ್ಡೆ ಅವರ ಮಾರ್ಗದರ್ಶನದಂತೆ ಆಯೋಜನೆಗೊಂಡಿದ್ದು ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಜಯಮ್ಮ, ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ್, ಅಕೌಂಟೆಂಟ್ ನಾಗೇಶ್ ರಾವ್ ಸ್ಯಾನಿಟೈಸರ್ ಘಟಕಗಳನ್ನು ಪಡೆದುಕೊಂಡರು.

ಈ ಯೋಜನೆಯು ಸಹ್ಯಾದ್ರಿ ಕೈಗಾರಿಕಾ ಸಮೂಹ ಮತ್ತು ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ನಿರ್ವಹಣೆಯ ಜಂಟಿ ಸಹಯೋಗದಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ ಈ ಯೋಜನೆಯ ಅಡಿಯಲ್ಲಿ ಸ್ವಯಂಚಾಲಿತ ಸ್ಯಾನಿಟೈಸರ್ ಘಟಕವನ್ನು ಕಣ್ಣೂರು ದರ್ಗಾಕ್ಕೆ ತಂಡ ವಿತರಿಸಿತು. ಚಾರ್ಜ್ ಇಂಡಸ್ಟ್ರಿ ಡಾ. ಅನುಷ್ ಬೆಕಲ್, ಆರ್ಡಿಎಲ್ ಟೆಕ್ನಾಲಜೀಸ್ ಸಿಇಒ ಶ್ರೀ ರಾಘವ್ ಶೆಟ್ಟಿ ಮತ್ತು ಎಸ್ ವಿ ಪ್ರಸಾದ್, ಪವನ್ ಎಚ್ ಜಿ, ಗೀತೇಶ್ ಮತ್ತು ಸಂದೀಪ್ ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!