Sunday, May 19, 2024
Homeಕರಾವಳಿ'ಹುಲಿವೇಷ ತುಳುನಾಡಿನ ಸಂಸ್ಕೃತಿ'; ಸಾಂಕೇತಿಕವಾಗಿ ಹುಲಿ ವೇಷ ಕುಣಿತಕ್ಕೆ ಅವಕಾಶ ನೀಡಬೇಕು-ದಿಲ್‌ರಾಜ್ ಆಳ್ವ

‘ಹುಲಿವೇಷ ತುಳುನಾಡಿನ ಸಂಸ್ಕೃತಿ’; ಸಾಂಕೇತಿಕವಾಗಿ ಹುಲಿ ವೇಷ ಕುಣಿತಕ್ಕೆ ಅವಕಾಶ ನೀಡಬೇಕು-ದಿಲ್‌ರಾಜ್ ಆಳ್ವ

spot_img
- Advertisement -
- Advertisement -

ಮಂಗಳೂರು, : ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿಯ ದಸರಾ ಉತ್ಸವದಲ್ಲಿ ಸರಳ ರೀತಿಯಲ್ಲಿ ದೇವರ ಸೇವೆಗೆ ಹುಲಿ ವೇಷ ತಂಡಗಳು ನಿರ್ಧರಿಸಿದ್ದು, ಹುಲಿವೇಷ ಆಡಂಬರವಲ್ಲ, ಬದಲಾಗಿ ಅದು ತುಳುನಾಡಿನ ಸಂಸ್ಕೃತಿ. ಹಾಗಾಗಿ ಸಾಂಕೇತಿಕವಾಗಿ ಹುಲಿ ವೇಷ ಕುಣಿತಕ್ಕೆ ಅವಕಾಶ ನೀಡಬೇಕು ಎಂದು ಮಂಗಳಾದೇವಿ ದಸರಾ ಶೋಭಾಯಾತ್ರೆ ಸಮಿತಿ ಒತ್ತಾಯಿಸಿದೆ.

ಸಮಿತಿಯ ಅಧ್ಯಕ್ಷರಾದ ದಿಲ್‌ರಾಜ್ ಆಳ್ವ, ಜಿಲ್ಲಾಡಳಿತ ಕೋವಿಡ್ ಹಿನ್ನೆಲೆಯಲ್ಲಿ ಹುಲಿವೇಷ ಕುಣಿತಕ್ಕೆ ನಿಷೇಧ ಹೇರಿದೆ. ಮಂಗಳಾದೇವಿ ದೇವಸ್ಥಾನ ಹಾಗೂ ಮಾರಿಯಮ್ಮ ದೇವಸ್ಥಾನದ ಶೋಭಾಯಾತ್ರೆ ಸಮಿತಿಯು ಈಗಾಗಲೇ ರಥೋತ್ಸವದಂದು ಭಾಗವಹಿಸುವ ಹುಲಿವೇಷ ತಂಡಗಳ ಪ್ರಮುಖರ ಸಭೆ ಕರೆದು ಸಾಂಕೇತಿಕವಾಗಿ ಸರಳ ರೀತಿಯಲ್ಲಿ ಆಚರಣೆಗೆ ಅವಕಾಶ ನೀಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

- Advertisement -
spot_img

Latest News

error: Content is protected !!