Thursday, June 4, 2026
Homeಕರಾವಳಿಉಡುಪಿಮಗಳಿಗೆ ಸೈನ್ಯ ಎಂದು ಹೆಸರಿಟ್ಟು ದೇಶಪ್ರೇಮ ಮೆರೆದ ಯೋಧ

ಮಗಳಿಗೆ ಸೈನ್ಯ ಎಂದು ಹೆಸರಿಟ್ಟು ದೇಶಪ್ರೇಮ ಮೆರೆದ ಯೋಧ

- Advertisement -
- Advertisement -

ಉಡುಪಿ: ಮೊನ್ನೆ ಉಡುಪಿ ಮೂಲದ ಉದ್ಯಮಿಯೊಬ್ಬರು ತಮ್ಮ ಮಗುವಿಗೆ ಕನ್ನಡ ಎಂದು ಹೆಸರಿಟ್ಟು ಸುದ್ದಿಯಾಗಿದ್ದರು. ಇದೀಗ ಸೈನಿಕರೊಬ್ಬರು ತಮ್ಮ ಮಗಳಿಗೆ ಸೈನ್ಯ ಎಂದು ಹೆಸರಿಟ್ಟು ದೇಶಪ್ರೇಮ ಮೆರೆದಿದ್ದಾರೆ.

ಉಡುಪಿ ಜಿಲ್ಲೆಯ ಹೆಬ್ರಿಯ ಸೈನಿಕರೊಬ್ಬರು ತಮ್ಮ ಹೆಣ್ಣು ಮಗುವಿಗೆ ಸೈನ್ಯ ಅಂತ ಹೆಸರಿಡುವ ಮೂಲಕ ತಮ್ಮ ವೃತ್ತಿಗೆ ಗೌರವ ಸೂಚಿಸಿದ್ದಾರೆ. ಹೆಬ್ರಿ ತಾಲೂಕಿನ ಆಶಾ- ಪ್ರಶಾಂತ್ ಪೂಜಾರಿ ಅವರು ತಮ್ಮ ಮಗುವಿಗೆ ಸೈನ್ಯ ಅಂತ ಹೆಸರಿಡುವ ಮೂಲಕ ಗಮನ ಸೆಳೆದಿದ್ದಾರೆ.

ಹಲವು ವರ್ಷಗಳಿಂದ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಶಾಂತ್ ಅವರು ಪ್ರಸ್ತುತ ಜಮ್ಮು ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ದೇಶ ಹಾಗೂ ಸೈನ್ಯದ ಮೇಲಿನ ವಿಶೇಷ ಅಭಿಮಾನ ಇರುವ ಪ್ರಶಾಂತ್ ಮಗುವಿಗೆ ಸೈನ್ಯ ಹೆಸರಿಡುವ ಮೂಲಕ ವೃತ್ತಿಗೆ ಗೌರವ ತೋರಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

- Advertisement -

Latest News

error: Content is protected !!