Friday, June 5, 2026
Homeಕರಾವಳಿಉಡುಪಿನಾಳೆ ಸಚಿವ ಕೆ.ಎಸ್. ಈಶ್ವರಪ್ಪ ಉಡುಪಿ ಜಿಲ್ಲಾ ಪ್ರವಾಸ

ನಾಳೆ ಸಚಿವ ಕೆ.ಎಸ್. ಈಶ್ವರಪ್ಪ ಉಡುಪಿ ಜಿಲ್ಲಾ ಪ್ರವಾಸ

- Advertisement -
- Advertisement -

ಉಡುಪಿ: ನಾಳೆ ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕ ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್. ಈಶ್ವರಪ್ಪ ಕುಂದಾಪುರ ತಾಲೂಕಿನ ಕೋಟೇಶ್ವರಕ್ಕೆ ಆಗಮಿಸಲಿದ್ದಾರೆ. ಶಿವಮೊಗ್ಗದಿಂದ ಆಗುಂಬೆ ಮೂಲಕ ಆಗಮಿಸಿ ಸುಮಾರು ಅಪರಾಹ್ನ 3.45ಕ್ಕೆ ಕೋಟೇಶ್ವರ ಬೈಪಾಸ್ ಮೂಲಕ ಕಾಪು ಗುರ್ಮೆ ಫೌಂಡೇಶನ್ ಗುರ್ಮೆ ಗೋ ವಿಹಾರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಈಶ್ವರಪ್ಪ ಭಾಗವಹಿಸಲಿದ್ದಾರೆ.

ಮಾರ್ಗ ಮಧ್ಯದಲ್ಲಿ ಸಾಲಿಗ್ರಾಮದ ಆಂಜನೇಯ ಸ್ವಾಮಿಯ ದೇವಾಲಯಕ್ಕೆ ಸಚಿವರು ಭೇಟಿ ನೀಡಲಿದ್ದು, ಬ್ರಹ್ಮಾವರ ಮತ್ತು ಕಲ್ಯಾಣಪುರ ಸಂತೆಕಟ್ಟೆ ಸಹಿತ ವಿವಿಧ ಭಾಗಗಳಲ್ಲಿ ದಾರಿಯುದ್ದಕ್ಕೂ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಮತ್ತು ಅಭಿಮಾನಿಗಳು ಸಚಿವರನ್ನು ಸ್ವಾಗತಿಸಲಿದ್ದಾರೆಂದು ಬಿಜೆಪಿಯ ಮೂಲಗಳು ತಿಳಿಸಿವೆ.

- Advertisement -

Latest News

error: Content is protected !!