Tuesday, May 7, 2024
Homeಜ್ಯೋತಿಷ್ಯವರ್ಷದ ಕೊನೆಯ ದಿನ ಹೇಗಿದೆ ನಿಮ್ಮ ರಾಶಿ ಫಲ? 2021ರಲ್ಲಿ ರಾಜಯೋಗ ಪಡೆವ ರಾಶಿ ಯಾವುದು?

ವರ್ಷದ ಕೊನೆಯ ದಿನ ಹೇಗಿದೆ ನಿಮ್ಮ ರಾಶಿ ಫಲ? 2021ರಲ್ಲಿ ರಾಜಯೋಗ ಪಡೆವ ರಾಶಿ ಯಾವುದು?

spot_img
- Advertisement -
- Advertisement -

ಮೇಷ: ಇಂದು ನಿಧಾನಗತಿಯ ಚಾಲನೆ ಅಗತ್ಯ. ಹೆಚ್ಚಿನ ಮಾನಸಿಕ ಒತ್ತಡವಿದ್ದರೂ ನಿಮ್ಮ ಯೋಜನೆಯಿಂದ ನೆಮ್ಮದಿ.ಅನಾವಶ್ಯಕ ವಿಷಯಕ್ಕೆ ತಲೆ ಹಾಕಬೇಡಿ. ಅನಾರೋಗ್ಯ ವಿದ್ದಲ್ಲಿ ಚಿಕಿತ್ಸೆ ಅಗತ್ಯ.

ವೃಷಭ: ಈ ವರ್ಷಾಂತ್ಯ ನಿಮಗೆ ಶುಭ ವಾಗಲಿದೆ.ಯಶಸ್ಸು , ಗೌರವ, ಒಲಿಯುತ್ತದೆ. ಮನೆಯಲ್ಲಿ ಮುನ್ನುಗ್ಗಿ ಕೆಲಸ ಮಾಡಬಹುದು. ಕುಟುಂಬ ಜೀವನ ಸುಂದರ ವಾಗಿರಲಿದೆ.

ಮಿಥುನ:ತಿಂಗಳ ಕೊನೆಯಲ್ಲಿ ಲೆಕ್ಕಾಚಾರ ಮಾಡುವಾಗ ಎಚ್ಚರ. ಧನಲಾಭ ವಾಗುತ್ತದೆ. ಆದರೂ ಖರ್ಚಿನ ಬಗ್ಗೆ ಜಾಗ್ರತೆ ಮಾಡಿ. ನೀವು ಮಾಡುತ್ತಿರುವ ಉದ್ಯೋಗ, ವ್ಯವಹಾರದಲ್ಲಿ ನಿಮಗೆ ನೆಮ್ಮದಿ ನೀಡುತ್ತದೆ.

ಕರ್ಕಾಟಕ:ಉದ್ಯೋಗಸ್ಥರಿಗೆ ಮೇಲಾಧಿಕಾರಿಗಳಿಂದ ಕಿರುಕುಳ ಸಾಧ್ಯತೆ ಇದೆ. ಆರೋಗ್ಯದ ಹದಗೆಡಬಹುದು ಎಚ್ಚರ. ಹಿರಿಯರ ಸಲಹೆ, ಸೂಚನೆಯನ್ನು ಪಾಲಿಸಿರಿ.ಜಾಗರೂಕತೆಯಿಂದ ಹೆಜ್ಜೆ ಮುಂದಿಡಿ.

ಸಿಂಹ:ವಾಹನ ಚಾಲನೆ ಮಾಡುವಾಗ ಜಾಗ್ರತೆವಹಿಸಿ.ಕಾರ್ಯಾರಂಭಕ್ಕೆ ಶುಭ ಸಮಯ.ನಿಮ್ಮ ಮನಸ್ಸಿಗೆ ತಾಳ್ಮೆ ಹಾಗೂ ಸಹನೆ ಅಗತ್ಯವಿದೆ. ಹೆಚ್ಚಿನ ಒತ್ತಡಕ್ಕೆ ದಿಂದ ದೂರವಿರಿ.

ಕನ್ಯಾ:ಸ್ತ್ರೀ ಯರಿಂದ ಶುಭಸುದ್ಧಿ ಕೇಳುವಿರಿ. ಹಿತಶತ್ರುಗಳ ಬಗ್ಗೆ ಎಚ್ಚರ. ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ. ದೂರ ಪ್ರಯಾಣ ಹೋಗುವಾಗ ಎಚ್ಚರ ಅಗತ್ಯ.

ತುಲಾ: ಮನೆಯಲ್ಲಿ ಮತ್ತು ಕುಟುಂಬದಲ್ಲಿ ಸಂತಸದ ವಾತಾವರಣವಿದ್ದು ಉತ್ತಮ ಕಾರ್ಯಗಳಲ್ಲಿ ತೊಡಗುವಿರಿ. ಆರೋಗ್ಯ ಉತ್ತಮವಾಗಿರುವುದು. ಸ್ನೇಹಿತರು ನಿಮ್ಮ ಸಂತಸಕ್ಕೆ ಖುಷಿಯಾಗುವರು.

ವೃಶ್ಚಿಕ: ಸಫ‌ಲತೆ ಎನ್ನುವುದು ಈ ದಿನ ನಿಮ್ಮ ಕೈ ಹಿಡಿಯುತ್ತದೆ. ವ್ಯಾಪಾರ, ವ್ಯವಹಾರದಲ್ಲಿ ಲಾಭ ಉಂಟಾಗಲಿದೆ. ಕ್ರಿಯಾಶೀಲರಾಗಿರಿ ಅನಾವಶ್ಯಕ ಕಾರ್ಯಗಳು ಬೇಡ.

ಧನು:ಆರೋಗ್ಯವು ಉತ್ತಮವಿದ್ದು ಕುಟುಂಬ ದಲ್ಲಿ ಸಂತಸವಿರುತ್ತದೆ. ಧನಲಾಭ, ವಸ್ತು ಲಾಭ ದೊರೆಯಲಿದೆ. ಸ್ತ್ರೀಯರ ಬಹುದಿನಗಳ ಕೋರಿಕೆಯು ನಿಮ್ಮವರಿಂದಲೇ ನನಸಾಗುತ್ತದೆ.

ಮಕರ: ಒತ್ತಡವು ನಿಮ್ಮನ್ನು ಆವರಿಸುವುದರಿಂದ ಮನಸ್ಸು ಈ ದಿನ ಕಾಡಲಿದೆ. ಅಶಾಂತಿ ನಿಮ್ಮಲ್ಲಿ ಸುಳಿಯದಂತೆ ನೋಡಿಕೊಳ್ಳಿ. ಅನಾರೋಗ್ಯದಿಂದ ಬಳಲಿಕೆ ಎದುರಿಸುವಿರಿ.. ಕೆಲಸದಲ್ಲಿ ಶುಭಫಲ.

ಕುಂಭ: ಪ್ರಯಾಣ ಸಂಭವ ಅಧಿಕ. ಕಾರ್ಯಕ್ಷೇತ್ರದಲ್ಲಿ ಒಳ್ಳೆಯ ಪ್ರಗತಿಯ ಮುನ್ಸೂಚನೆಯ ತೋರಿಕೆ ಎದುರಿಸುವಿರಿ. ಯಾವುದೇ ವಿಚಾರದಲ್ಲಿ ಮುನ್ನಡೆಯಲು ಅವಸರ ಬೇಡ.

ಮೀನ: ದುಂದುವೆಚ್ಚ ದಿಂದ ದೂರವಿರಿ. ಹಲವರು ನಿಮ್ಮ ಒಳ್ಳೆತನದ ದುರುಪಯೋಗ ಮಾಡಿಕೊಳ್ಳಲಿದ್ದಾರೆ.ನಿಮ್ಮ ಜಾಗರೂಕತೆ ಜೊತೆಗೆ ನೀವಿರಿ.

- Advertisement -
spot_img

Latest News

error: Content is protected !!