Thursday, July 30, 2026
Homeಆರಾಧನಾತಿರುಪತಿ ಭಕ್ತರೇ ಎಚ್ಚರ: TTD ಹೆಸರಿನಲ್ಲಿದ್ದ ಬೃಹತ್ ನಕಲಿ ವೆಬ್‌ಸೈಟ್ ಜಾಲ ಪತ್ತೆ!

ತಿರುಪತಿ ಭಕ್ತರೇ ಎಚ್ಚರ: TTD ಹೆಸರಿನಲ್ಲಿದ್ದ ಬೃಹತ್ ನಕಲಿ ವೆಬ್‌ಸೈಟ್ ಜಾಲ ಪತ್ತೆ!

- Advertisement -
- Advertisement -

ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಹಾಗೂ ಸೇವಾ ಟಿಕೆಟ್‌ಗಳ ಹೆಸರಿನಲ್ಲಿ ಭಕ್ತರಿಗೆ ವಂಚಿಸುತ್ತಿದ್ದ ಬೃಹತ್ ನಕಲಿ ವೆಬ್‌ಸೈಟ್ ಜಾಲವೊಂದನ್ನು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಂಡಳಿ ಪತ್ತೆಹಚ್ಚಿದ್ದು, ಭಕ್ತರು ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ttddevasthanam.online ಎಂಬ ನಕಲಿ ವೆಬ್‌ಸೈಟ್ ಸಂಪೂರ್ಣವಾಗಿ ಟಿಟಿಡಿಯ ಅಧಿಕೃತ ಜಾಲತಾಣದಂತೆಯೇ ರೂಪುಗೊಂಡಿದ್ದು, ಭಕ್ತರನ್ನು ಸುಲಭವಾಗಿ ನಂಬಿಸಿ ಮೋಸಗೊಳಿಸುವ ರೀತಿಯಲ್ಲಿದೆ. ಈ ಜಾಲತಾಣದಲ್ಲಿ ಮುಂಬರುವ ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳ ಶ್ರೀವಾರಿ ದರ್ಶನ ಹಾಗೂ ವಿವಿಧ ಸೇವಾ ಟಿಕೆಟ್‌ಗಳು ಲಭ್ಯವಿವೆ ಎಂದು ಸುಳ್ಳು ಮಾಹಿತಿ ಪ್ರಕಟಿಸಿ ಭಕ್ತರಿಂದ ಹಣ ದೋಚಲಾಗುತ್ತಿತ್ತು. ಇದರಿಂದ ಭಕ್ತರು ಹಣ ಕಳೆದುಕೊಳ್ಳುವುದಲ್ಲದೆ, ದೇವಸ್ಥಾನ ಮಂಡಳಿಯ ಗೌರವಕ್ಕೂ ಧಕ್ಕೆ ತರಲಾಗುತ್ತಿದೆ ಎಂದು ಟಿಟಿಡಿ ಕಳವಳ ವ್ಯಕ್ತಪಡಿಸಿದೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಟಿಟಿಡಿ ಆಡಳಿತ ಮಂಡಳಿ, ನಕಲಿ ವೆಬ್‌ಸೈಟ್ ಅನ್ನು ತಕ್ಷಣವೇ ಬ್ಲಾಕ್ ಮಾಡಲು ಸಂಬಂಧಿಸಿದ ಡೊಮೇನ್ ಪ್ಲಾಟ್‌ಫಾರ್ಮ್‌ಗೆ ಮನವಿ ಮಾಡಿದ್ದು, ತಿರುಮಲ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

ವಂಚಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿರುವ ಅಧಿಕಾರಿಗಳು, ಶ್ರೀವಾರಿ ದರ್ಶನ, ವಸತಿ ಹಾಗೂ ಆನ್‌ಲೈನ್ ಸೇವೆಗಳ ಬುಕಿಂಗ್‌ಗಾಗಿ ಭಕ್ತರು ಕೇವಲ ಟಿಟಿಡಿಯ ಅಧಿಕೃತ ವೆಬ್‌ಸೈಟ್ ಮತ್ತು ಮೊಬೈಲ್ ಆ್ಯಪ್ ಅನ್ನು ಮಾತ್ರ ಬಳಸಬೇಕು ಹಾಗೂ ಅನಧಿಕೃತ ಲಿಂಕ್‌ಗಳನ್ನು ನಂಬಿ ಹಣ ಕಳೆದುಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.

- Advertisement -

Latest News

error: Content is protected !!