Tuesday, May 14, 2024
Homeಕರಾವಳಿಪಡುಬಿದ್ರೆಯಲ್ಲಿ ಕಾಂಪೌಂಡ್ ಒಳಗೆ ನಿಲ್ಲಿಸಿದ್ದ ಟಿಪ್ಪರ್ ಕಳವು

ಪಡುಬಿದ್ರೆಯಲ್ಲಿ ಕಾಂಪೌಂಡ್ ಒಳಗೆ ನಿಲ್ಲಿಸಿದ್ದ ಟಿಪ್ಪರ್ ಕಳವು

spot_img
- Advertisement -
- Advertisement -

ಮಂಗಳೂರು:  ಕಾಂಪೌಂಡ್ ಒಳಗೆ ನಿಲ್ಲಿಸಿದ್ದ ಟಿಪ್ಪರನ್ನು ಕಳವು ಮಾಡಿದ ಘಟನೆ ಪಡುಬಿದ್ರಿ ಠಾಣಾ ವ್ಯಾಪ್ತಿಯ ಮುದರಂಗಡಿಯಲ್ಲಿ ನಡೆದಿದೆ.

ಮಂಗಳೂರಿನ ಗಂಜಿಮಠದ ಬಳಿ ನಡೆಯುತ್ತಿದ್ದ ರಸ್ತೆ ಕಾಮಗಾರಿಯನ್ನು ವಿಪರೀತ ಮಳೆಯಿಂದಾಗಿ ಕಳೆದ 2 ವಾರಗಳಿಂದ ನಿಲ್ಲಿಸಲಾಗಿತ್ತು. ಅಲ್ಲಿನ ಕೆಲಸದ 5 ಟಿಪ್ಪರ್ ಹಾಗೂ 1 ಜೆ.ಸಿ.ಬಿ.ಯನ್ನು ಸಾಂತೂರು ಗ್ರಾಮದ ಮುದರಂಗಡಿಯ ಅಳುಂಬೆ ಎಂಬಲ್ಲಿರುವ ಡಾಂಬಾರು ಪ್ಲಾಂಟ್‌ನ ಕಂಪೌಂಡ್‌ನ ಒಳಗಡೆ ನಿಲ್ಲಿಸಲಾಗಿತ್ತು. ಅಲ್ಲಿ ನಿಲ್ಲಿಸಿದ 5 ಟಿಪ್ಪರುಗಳ ಪೈಕಿ KA-20-C-6741 ನೇ ನಂಬರಿನ ಟಿಪ್ಪರ್ ನ್ನು ಕಳ್ಳತನ ಮಾಡಲಾಗಿದೆ. ಈ ಬಗ್ಗೆ ಪಡುಬಿದ್ರೆ ಠಾಣೆಯಲ್ಲಿ ದೂರು ದಾಖಲಾಗಿದೆ.

- Advertisement -
spot_img

Latest News

error: Content is protected !!