- Advertisement -
- Advertisement -
ಕಾರ್ಕಳ:ಟಿಪ್ಪರ್ ಚಾಲಕ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಕುಕ್ಕುಂದೂರು ಗ್ರಾಮದಲ್ಲಿ ನಡೆದಿದೆ. ಕಾರ್ಕಳದ ಈರಣ್ಣ(40) ಮೃತ ಟಿಪ್ಪರ್ ಚಾಲಕ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈರಣ್ಣ ಟಿಪ್ಪರ್ ಲಾರಿಯ ಚಾಲಕರಾಗಿ ಕೆಲಸ ಮಾಡಿಕೊಂಡಿದ್ದು ಸೆ.25ರಂದು ಬೆಳಗ್ಗೆ ಕೆಲಸಕ್ಕೆ ಹೋಗಿದ್ದು ಮಧ್ಯಾಹ್ನ ವೇಳೆ ಪತ್ನಿಗೆ ಕರೆ ಮಾಡಿ ಸಂಜೆ ಮನೆಗೆ ಬೇಗ ಬರುವುದಾಗಿ ತಿಳಿಸಿದ್ದರು.ಆದರೆ ನಂತರ ಮನೆಗೆ ಬಾರದೇ ನಾಪತ್ತೆಯಾಗಿದ್ದರು.
ಹುಡುಕಾಡಿದಾಗ ಕುಕ್ಕುಂದೂರಿನಲ್ಲಿರುವ ಮೈದಾನದಲ್ಲಿರುವ ವಾಟರ್ ಟ್ಯಾಂಕಿನ ಮೇಲೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಈ ಸಾವಿನಲ್ಲಿ ಸಂಶಯವಿರುವುದಾಗಿ ಮೃತರ ಪತ್ನಿ ಮಹಾನಂದ ಕಲ್ಯಾಣಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
- Advertisement -