Monday, May 6, 2024
Homeತಾಜಾ ಸುದ್ದಿಶಾಲೆಯಲ್ಲಿ ಮದ್ಯದ ಬಾಟಲಿ ಸಮೇತ ಸಿಕ್ಕಿಬಿದ್ದ ಶಿಕ್ಷಕಿ: ಗುಟ್ಟು ರಟ್ಟಾಗುತ್ತಿದ್ದಂತೆ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಬೆದರಿಕೆ ಹಾಕಿದ...

ಶಾಲೆಯಲ್ಲಿ ಮದ್ಯದ ಬಾಟಲಿ ಸಮೇತ ಸಿಕ್ಕಿಬಿದ್ದ ಶಿಕ್ಷಕಿ: ಗುಟ್ಟು ರಟ್ಟಾಗುತ್ತಿದ್ದಂತೆ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಬೆದರಿಕೆ ಹಾಕಿದ ಕಿಲಾಡಿ

spot_img
- Advertisement -
- Advertisement -

ತುಮಕೂರು ; ಪ್ರತಿದಿನ ಮದ್ಯ ಸೇವಿಸಿ ಮಕ್ಕಳಿಗೆ ಪಾಠ ಮಾಡುತ್ತಿದ್ದ ಶಿಕ್ಷಕಿಯೊಬ್ಬರು ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದ ಘಟವೆ ತುಮಕೂರು ಜಿಲ್ಲೆಯ ಗಳಿಗೇನಹಳ್ಳಿ ಕ್ಲಸ್ಟರ್ ವ್ಯಾಪ್ತಿಯ ಚಿಕ್ಕಸಾರಂಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಶಿಕ್ಷಕಿ ಗಂಗಲಕ್ಷ್ಮಮ್ಮ ಸಿಕ್ಕಿ ಹಾಕಿಕೊಂಡ ಶಿಕ್ಷಕಿ. ಪ್ರತಿ ದಿನ ಶಿಕ್ಷಕಿಯ ದುರ್ವರ್ತನೆ ಕಂಡು ಮಕ್ಕಳ ಪೋಷಕರೇ ಶಾಲೆಗೆ ಬೀಗ ಹಾಕಿ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಅದರಂತೆ ಶಿಕ್ಷಣಾಧಿಕಾರಿ ಶಾಲೆಗೆ ಭೇಟಿ ನೀಡಿದಾಗ ಶಿಕ್ಷಕಿ ಶಾಲೆಯಲ್ಲಿಯೇ ಮದ್ಯ ಸೇವಿಸುತ್ತಾರೆ ಎನ್ನುವುದು ತಿಳಿದು ಬಂದಿದೆ. ಶಿಕ್ಷಕಿಯ ಟೇಬಲ್ ತೆರೆದು ನೋಡಿದಾಗ ಅದರಲ್ಲಿ ಮದ್ಯದ ಬಾಟಲ್ ಪತ್ತೆಯಾಗಿವೆ. ಮದ್ಯದ ಬಾಟಲಿ ಪತ್ತೆಯಾಗುತ್ತಿದ್ದಂತೆ ಶಿಕ್ಷಕಿ ತಾನು ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಬೆದರಿಕೆ ಹಾಕಿದ್ದಾರೆ. ಇದೀಗ ಆಕೆಯನ್ನು ಅಮಾನತು ಮಾಡಲಾಗಿದೆ ಎನ್ನಲಾಗಿದೆ..

- Advertisement -
spot_img

Latest News

error: Content is protected !!