Wednesday, May 15, 2024
Homeತಾಜಾ ಸುದ್ದಿಬ್ರಿಟನ್‌ ನ ದೀರ್ಘಾವಧಿ ಆಳಿದ ರಾಣಿ ಎರಡನೇ ಎಲಿಜಬೆತ್‌ ನಿಧನ

ಬ್ರಿಟನ್‌ ನ ದೀರ್ಘಾವಧಿ ಆಳಿದ ರಾಣಿ ಎರಡನೇ ಎಲಿಜಬೆತ್‌ ನಿಧನ

spot_img
- Advertisement -
- Advertisement -

ಬ್ರಿಟನ್‌ ಇತಿಹಾಸದಲ್ಲೇ ಅತಿ ಹೆಚ್ಚು ಕಾಲ ದೇಶವನ್ನಾಳಿದ ಕ್ವೀನ್‌ ಎಲಿಜಬೆತ್‌ II ವಯೋಸಹಜ ಖಾಯಿಲೆಯಿಂದ ನಿಧನರಾಗಿದ್ದಾರೆ ಎಂದು ಬಂಕಿಂಗ್‌ಹ್ಯಾಮ್‌ ಅರಮನೆ ಹೇಳಿಕೆ ಬಿಡುಗಡೆ ಮಾಡಿದೆ.

96 ವರ್ಷದ ಎಲಿಝಬೆತ್ ಅವರ ಆರೋಗ್ಯದಲ್ಲಿ ಏರುಪೇರಾದ ಬಳಿಕ ವೈದ್ಯರ ನಿಗಾದಲ್ಲಿ ಅವರನ್ನು ಇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು ಕೊನೆಯುಸಿರೆಳದಿದ್ದಾರೆ.

ರಾಣಿಯ ಮಗ ಮತ್ತು ಉತ್ತರಾಧಿಕಾರಿ ಪ್ರಿನ್ಸ್ ಚಾರ್ಲ್ಸ್, ಮೊಮ್ಮಕ್ಕಳಾದ ವಿಲಿಯಂ ಮತ್ತು ಹ್ಯಾರಿ ಮತ್ತು ಅವರ ಕುಟುಂಬಗಳು ಇರುವ ಸ್ಕಾಟಿಷ್ ಪರ್ವತಶ್ರೇಣಿಗಳಲ್ಲಿನ ಅವರ ಬಾಲ್ಮೊರಲ್ ಮನೆಯಲ್ಲಿ ರಾಣಿ ತಮ್ಮ ಕೊನೆಯ ದಿನಗಳನ್ನು ಕಳೆದರು ಎನ್ನಲಾಗಿದೆ.

ರಾಣಿಯ ಗೌರವಾರ್ಥ ಬ್ರಿಟನ್‌ನಲ್ಲಿ 10 ದಿನ ರಾಷ್ಟ್ರೀಯ ಶೋಕ ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿ ಅನೇಕ ಗಣ್ಯರು ರಾಣಿ ಎಲಿಝಬೆತ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

- Advertisement -
spot_img

Latest News

error: Content is protected !!