Thursday, June 4, 2026
Homeಕರಾವಳಿಉಡುಪಿಉಡುಪಿಯಲ್ಲಿ ಸಿಡಿಲು ಬಡಿದು ಮನೆಗೆ ಅಪಾರ ನಷ್ಟ; ಮನೆಮಂದಿ ಪ್ರಾಣಾಪಾಯದಿಂದ ಪಾರು

ಉಡುಪಿಯಲ್ಲಿ ಸಿಡಿಲು ಬಡಿದು ಮನೆಗೆ ಅಪಾರ ನಷ್ಟ; ಮನೆಮಂದಿ ಪ್ರಾಣಾಪಾಯದಿಂದ ಪಾರು

- Advertisement -
- Advertisement -

ಉಡುಪಿ: ಬುಧವಾರ ಸಂಜೆಯಿಂದ ಗುಡುಗು ಮಿಂಚು ಸಹಿತ ಧಾರಕಾರವಾಗಿ ಸುರಿದ ಭಾರಿ ಮಳೆಗೆ ಮನೆಗೆ ಸಿಡಿಲು ಬಡಿದು ಮನೆ ಮಂದಿ ಪ್ರಾಣಾಪಾಯದಿಂದ ಪಾರಾದ ಘಟನೆ ನಾಲ್ಕೂರು ಗ್ರಾಮದ ಕರ್ಜೆರಡ್ಡ ಎಂಬಲ್ಲಿ ಎ.14 ರಂದು ನಡೆದಿದೆ.


ರಾತ್ರಿ ವೇಳೆ ಮನೆಮಂದಿಯೆಲ್ಲ ಮನೆಯಲ್ಲಿದ್ದು ಗಂಟೆ 9. 30 ಕ್ಕೆಸುಮಾರಿಗೆ ಮನೆಗೆ ಸಿಡಿಲು ಬಡಿಯಿತು.ಮನೆಯಲ್ಲಿ ತಾಯಿ, ತಮ್ಮ ತಂಗಿ ನಾನು ಸೇರಿ 4 ಮಂದಿ ಇದ್ದಿದ್ದು ಒಮ್ಮೆಲೆ ಸಿಡಿಲಿನ ಕೆಣ್ಣಾಲಿಗೆ ಮನೆಗೆ ಬೆಂಕಿ ಇಡಿಯಿತು.ತಾಯಿ ಹಾಗೂ ನನಗೆ ಅಲ್ಪ ಪ್ರಮಾಣದ ಸಮಸ್ಯೆಯಾಯಿತು ಎಂದು ಮನೆಯ ಪ್ರಸಾದ್ ತಿಳಿಸಿದರು.


ಸಿಡಿಲಿನ ರಭಸಕ್ಕೆ ಮನೆಯ ವಯರ್, ಟಿವಿ, ಪ್ಯಾನ್, ಎರಡು ಪಂಪ್, ಬಲ್ಟ್, ಎಲ್ಲ ಎಲೆ ಕ್ಟ್ರಾನಿಕ್ ಉಪಕರಣಗಳು ಸುಟ್ಟು ಕರಗಿದೆ ಹಾಗೂ ಮನೆಯ ಗೋಡೆ ಬಿರುಕು ಬಿಟ್ಟಿದೆ. ಅಂದಾಜು ಸುಮಾರು ಒಂದೂವರೆ ಲಕ್ಷ ನಷ್ಟ ಸಂಭವಿಸಿದೆ ಎಂದು ಮನೆಯವರು ತಿಳಿಸಿದ್ದಾರೆ. ಈಗಾಗಲೇ ಬಳಂಜ ಗ್ರಾ.ಪಂ.ಗೆ ಮಾಹಿತಿ ನೀಡಲಾಗಿದೆ.ಪಂ ಸದಸ್ಯ ಬಾಲಕೃಷ್ಣ ಪೂಜಾರಿ ಆಗಮಿಸಿ ಸಹಕರಿಸಿ ದರು.ಮನೆಯ ಅಕ್ಕಪಕ್ಕದವರು ಆಗಮಿಸಿ ಸೂಕ್ತ ಕ್ರಮ ಕೈಗೊಂಡಿದ್ದಾರೆ.

- Advertisement -

Latest News

error: Content is protected !!