Saturday, June 6, 2026
Homeಕರಾವಳಿಉಡುಪಿಕೋಟ: ಕಾಲು ಜಾರಿ ಬಾವಿಗೆ ಬಿದ್ದು ರೈತ ಸಾವು

ಕೋಟ: ಕಾಲು ಜಾರಿ ಬಾವಿಗೆ ಬಿದ್ದು ರೈತ ಸಾವು

- Advertisement -
- Advertisement -

ಕೋಟ: ರೈತ ಕಾಲು ಜಾರಿ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಕೋಟಾದ ಸಾಸ್ತಾನ ಗೋಳಿಗರಡಿ ಗ್ರಾಮದಲ್ಲಿ ನಡೆದಿದೆ.  ಸಾಸ್ತಾನ ಗೋಳಿಗರಡಿ ನಿವಾಸಿ ರಾಜೇಂದ್ರ ಪೂಜಾರಿ(38) ಮೃತಪಟ್ಟ ವ್ಯಕ್ತಿ.

ರಾಜೇಂದ್ರ ಪೂಜಾರಿ ಕೃಷಿ ಕೆಲಸ ಮಾಡಿಕೊಂಡಿದ್ದು, ಎಂದಿನಂತೆ ಮನೆಯ ಪಕ್ಕದಲ್ಲಿರುವ ಗದ್ದೆಗೆ ನೀರು ಬಿಡಲು ಬಾವಿಯ ಬಳಿ ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ. ಈ ಸಂಬಂಧ ಕೋಟ ಠಾಣೆಯಲ್ಲಿ ಪ್ರಕರಣ  ದಾಖಲಾಗಿದೆ.

- Advertisement -

Latest News

error: Content is protected !!