Friday, May 17, 2024
Homeಕೊಡಗುಪೊನ್ನಂಪೇಟೆಯ ಖಾಸಗಿ ಶಾಲೆಯಲ್ಲಿ ಬಜರಂಗದಳ ಪ್ರಶಿಕ್ಷಣ ವರ್ಗ ಹಿನ್ನೆಲೆ:ಶಾಲೆ ತ್ಯಜಿಸಲು ಮುಂದಾದ ಮೂವರು ಮುಸ್ಲಿಂ ವಿದ್ಯಾರ್ಥಿಗಳು

ಪೊನ್ನಂಪೇಟೆಯ ಖಾಸಗಿ ಶಾಲೆಯಲ್ಲಿ ಬಜರಂಗದಳ ಪ್ರಶಿಕ್ಷಣ ವರ್ಗ ಹಿನ್ನೆಲೆ:ಶಾಲೆ ತ್ಯಜಿಸಲು ಮುಂದಾದ ಮೂವರು ಮುಸ್ಲಿಂ ವಿದ್ಯಾರ್ಥಿಗಳು

spot_img
- Advertisement -
- Advertisement -

ಮಡಿಕೇರಿ: ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ‌ ಖಾಸಗಿ ಶಾಲೆಯಲ್ಲಿ ಬಜರಂಗದಳದಿಂದ ಪ್ರಶಿಕ್ಷಣ ವರ್ಗ ನಡೆಸಿರುವ ಹಿನ್ನೆಲೆಯಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿಗಳು ಶಾಲೆ ತ್ಯಜಿಸಲು ಮುಂದಾಗಿದ್ದಾರೆ

ಮೂವರು ಪ್ರಾಥಮಿಕ‌ ಶಾಲಾ ವಿದ್ಯಾರ್ಥಿಗಳ ಪೋಷಕರು ಮಕ್ಕಳ ವರ್ಗಾವಣೆ ಪತ್ರ ಕೇಳಿದ್ದಾರೆ ಎಂದು ಹೇಳಲಾಗಿದೆ. ಮಕ್ಕಳ ಪೋಷಕರಿಗೆ ದುಬೈಯಿಂದ ದೂರವಾಣಿ ಕರೆ ಬಂದಿದ್ದು, ಮಕ್ಕಳನ್ನು ಶಾಲೆ ಬಿಡಿಸುವಂತೆ ದುಬೈಯಿಂದ ಸೂಚನೆ ಬಂದಿರುವ ಕಾರಣ ಟಿಸಿ ನೀಡುವಂತೆ ಪೋಷಕರು ಅರ್ಜಿ ಹಾಕಿದ್ದಾರೆ ಎನ್ನಲಾಗಿದೆ.

ಟಿಸಿ ಕೇಳಿರುವ ವಿಚಾರವನ್ನು ಶಾಲಾ ಆಡಳಿತ ಮಂಡಳಿ ದೃಢಪಡಿಸಿದೆ. ಪೊನ್ನಂಪೇಟೆ ನಗರದಲ್ಲಿರುವ ಶ್ರೀ ಸಾಯಿ ಶಂಕರ ಶಾಲೆಯಲ್ಲಿ ಕಳೆದ ವಾರ ಬಜರಂಗದಳದ ಪ್ರಶಿಕ್ಷಣ ಅಭ್ಯಾಸ ವರ್ಗ ನಡೆದಿತ್ತು. ಸಾಕಷ್ಟು ಪರ ಮತ್ತು ವಿರೋಧಾಭಿಪ್ರಾಯಗಳು ಸೃಷ್ಟಿಯಾಗಿದ್ದವು.

- Advertisement -
spot_img

Latest News

error: Content is protected !!