Thursday, June 4, 2026
Homeಕರಾವಳಿಉಡುಪಿಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಂದು ಉಪ್ಪುಂದಕ್ಕೆ ಭೇಟಿ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಂದು ಉಪ್ಪುಂದಕ್ಕೆ ಭೇಟಿ

- Advertisement -
- Advertisement -

ಉಡುಪಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಂದು ಬೈಂದೂರು ತಾಲೂಕಿನ ಉಪ್ಪುಂದಕ್ಕೆ ಭೇಟಿ ನೀಡಲಿದ್ದಾರೆ.‌

ಬೆಳಗ್ಗೆ 9.30 ಕ್ಕೆ ರಸ್ತೆ ಮಾರ್ಗವಾಗಿ ಮಂಗಳೂರಿನಿಂದ ಹೊರಡಲಿರುವ ಡಿ.ಕೆ. ಶಿವಕುಮಾರ್, ಬೆಳಗ್ಗೆ 11 ಗಂಟೆಗೆ ಉಪ್ಪುಂದಕ್ಕೆ ಆಗಮಿಸಲಿದ್ದಾರೆ.

ಉಪ್ಪುಂದದಲ್ಲಿ ಯು.ಬಿ.ಎಸ್. ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಅಯೋಜಿಸಿರುವ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ನೂತನ ರಾಜಗೋಪುರ ಸಮರ್ಪಣಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಸಂಜೆ 3 ಗಂಟೆಗೆ ಉಪ್ಪುಂದದಿಂದ ವಾಪಸಾಗಲಿರುವ ಡಿ.ಕೆ. ಶಿವಕುಮಾರ್ ಸಂಜೆ 6.50ಕ್ಕೆ ಮಂಗಳೂರಿನಿಂದ ಬೆಂಗಳೂರಿಗೆ ‌ನಿರ್ಗಮಿಸಲಿದ್ದಾರೆ. ನಿನ್ನೆ ಮಂಗಳೂರಿಗೆ ಅಗಮಿಸಿದ್ದ ಡಿ.ಕೆ. ಶಿವಕುಮಾರ್ ರಾತ್ರಿ ಮಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದರು.

- Advertisement -

Latest News

error: Content is protected !!