- Advertisement -


- Advertisement -
ಕೊಡಗು: ಸೋಮವಾರ ಪೇಟೆಯ ಸುರ್ಲಬಿ ಗ್ರಾಮದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯ ತಲೆ ಕತ್ತರಿಸಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಬಾಲಕಿಯ ರುಂಡ ಪತ್ತೆಯಾಗಿದೆ. ಕೊಲೆಯಾದ ಸ್ಥಳದಿಂದ ಸ್ವಲ್ಪ ದೂರದಲ್ಲೇ ಪೊದೆಯಲ್ಲಿ ಬಾಲಕಿಯ ರುಂಡ ಪತ್ತೆಯಾಗಿದೆ.
ಕೊಲೆ ಆರೋಪಿ ಓಂಕಾರಪ್ಪ ಇಂದು ಮುಂಜಾನೆ ಪೊಲೀಸರಿಗೆ ಶರಣಾಗಿದ್ದ. ಇದು ಆತನನ್ನು ಸ್ಥಳ ಮಹಜರಿಗೆ ಕರೆದೊಯ್ದ ವೇಳೆ ಪೊದೆಯೊಂದರಲ್ಲಿ ವಿದ್ಯಾರ್ಥಿನಿಯ ರುಂಡವನ್ನು ಇಟ್ಟಿರೋದಾಗಿ ಹೇಳಿದ್ದ. ಅಂತೆಯೇ ಆರೋಪಿಯನ್ನು ಸ್ಥಳಕ್ಕೆ ಕರೆದೊಯ್ದು ಬಾಲಕಿಯ ರುಂಡವನ್ನು ಹುಡುಕಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
- Advertisement -


