Tuesday, May 21, 2024
Homeತಾಜಾ ಸುದ್ದಿಬೆಳ್ತಂಗಡಿ: ಶಿರ್ಲಾಲ್ ನ ವಿಕಾಸ ಹಬ್ಬ ಕಾರ್ಯಕ್ರಮದಲ್ಲಿ ಮೂವರು ಕಾಂಗ್ರೆಸ್ಸಿಗರು ಬಿಜೆಪಿಗೆ ಸೇರ್ಪಡೆ

ಬೆಳ್ತಂಗಡಿ: ಶಿರ್ಲಾಲ್ ನ ವಿಕಾಸ ಹಬ್ಬ ಕಾರ್ಯಕ್ರಮದಲ್ಲಿ ಮೂವರು ಕಾಂಗ್ರೆಸ್ಸಿಗರು ಬಿಜೆಪಿಗೆ ಸೇರ್ಪಡೆ

spot_img
- Advertisement -
- Advertisement -

ಬೆಳ್ತಂಗಡಿ:‌ಬೆಳ್ತಂಗಡಿ ತಾಲೂಕಿನ ಶಿರ್ಲಾಲ್ ನ ವಿಕಾಸ ಹಬ್ಬ ಕಾರ್ಯಕ್ರಮದಲ್ಲಿ ಶಿರ್ಲಾಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷರಾದ ಸಕ್ರಿಯ ಕಾಂಗ್ರೆಸ್ ನ ನಾರಾಯಣ್ ರಾವ್ ಕರಂಬಾರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಹಾಗೆಯೇ ತಾಲೂಕು PWD ಸಂಘದ ಅಧ್ಯಕ್ಷರು ಸಕ್ರಿಯ ಕಾಂಗ್ರೆಸ್ ಕಾರ್ಯಕರ್ತ ವಿನಯ್ ಕುಮಾರ್ ಹೆಗ್ಡೆ ನಾರಾವಿ, ರೈತ ಸಂಘದ ಅಧ್ಯಕ್ಷರಾದ ಸುಧಾಕರ್ ಜೈನ್ ಕಜಂಗೆ ಕೊಕ್ರಾಡಿ ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ.

ಶಿರ್ಲಾಲು ಮತ್ತು ಕರಂಬಾರು ಗ್ರಾಮಗಳಲ್ಲಿ 17 ಕೋಟಿಗೂ ಹೆಚ್ಚಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ಕಾರ್ಯಕ್ರಮಗಳ ” ವಿಕಾಸದ ಹಬ್ಬ” ಎನ್ನುವ ವಿಶಿಷ್ಟ ಕಾರ್ಯಕ್ರಮದಲ್ಲಿ ಮೂವರೂ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ತಾಲೂಕಿನ ಜನಪ್ರಿಯ ಶಾಸಕರಾದ ಹರೀಶ್ ಪೂಂಜಾ ರವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಿದರು.ಈ ವೇಳೆ ಮಾತನಾಡಿದ ಹರೀಶ್‌ ಪೂಂಜ, ಶಿರ್ಲಾಲ್ ಹಾಗೂ ಕರಂಬಾರಿನ ಜನತೆ ನೀಡಿದ ಒಂದು ಮತ ಇಂದು ಇಷ್ಟು ದೊಡ್ಡ ಮೊತ್ತದ ಕಾಮಗಾರಿ ನಿರ್ಮಾಣವಾಗಲು ಸಹಕಾರಿಯಾಗಿದೆ ಎಂದು ಹೇಳಿದ್ರು.

ಇನ್ನು ಶಿರ್ಲಾಲ್ ವಿವಿಧ ಕಾಮಗಾರಿಗಳು ವಿವರ ಇಲ್ಲಿದೆ

1. ಒಸರು ಗುಂಡಿ ಕಿಂಡಿ ಅಣೆಕಟ್ಟು 3ಕೋಟಿ.

2. ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ರಸ್ತೆ ಕಾಂಕ್ರಿಟೀಕರಣ 1.50ಕೋಟಿ ವೆಚ್ಚ.

3. ಹುರುoಬಿದೊಟ್ಟು ದೇವಸ್ಥಾನದ ಬಳಿ ತಡೆಗೋಡೆ ನಿರ್ಮಾಣ 30ಲಕ್ಷ.

4. ಪೊಯ್ಯಲೆ ರಸ್ತೆ ಕಾಂಕ್ರಿಟೀಕರಣ 13ಲಕ್ಷ.

5. ಶಿರ್ಲಾಲು ಶಾಲೆಯ ಮಾಡಿನ ದುರಸ್ಥಿ ಮತ್ತು ಶೌಚಾಲಯ ರಚನೆ 12ಲಕ್ಷ.

6. ಪಲ್ಲದಲ್ಕೆ ರಸ್ತೆ ಕಾಂಕ್ರಿಟೀಕರಣ 10 ಲಕ್ಷ.

7. ಕೊಡಂಗೆ ಬೈಲ್ ಹುಂಡೇಲು ರಸ್ತೆ ಕಾಂಕ್ರಿಟೀಕರಣ 10 ಲಕ್ಷ.

8. ಮನಿಲ -ಹೆಟುಟ್ಟು ರಸ್ತೆ ಕಾಂಕ್ರಿಟೀಕರಣ 4ಲಕ್ಷ.

9. ಶಿರ್ಲಾಲು ಶಾಲೆಗೆ ಕೊಳವೆ ಬಾವಿ 1ಲಕ್ಷ.

10. ರಿಕ್ಷಾ ತಂಗುದಾಣ ನಿರ್ಮಾಣ 6 ಲಕ್ಷ.

*ಒಟ್ಟು ಮೊತ್ತ 7.56ಕೋಟಿ*

*ಶಿಲಾನ್ಯಾಸವಾದ ಕಾಮಗಾರಿ*

1. ಭೈರವ ಕಲ್ಲಿಂದ ಮನಿಲ ರಸ್ತೆ 2ಕೋಟಿ

2. ಕಿನ್ನಿಕಟ್ಟ ರಸ್ತೆ ಕಾಂಕ್ರಿಟೀಕರಣ 20 ಲಕ್ಷ

*ಕರಂಬಾರು ಗ್ರಾಮದ ಅಭಿವೃದ್ಧಿ ಕಾಮಗಾರಿ*

1. ಸವಣಾಲಿಂದ ದರ್ಬೆದ ಪಲ್ಕೆ ರಸ್ತೆ ಡಾಂಬರೀಕರಣ 2ಕೋಟಿ.

2. ಗುಂಡೇರಿಯಿಂದ ಜೀತ ಮುಕ್ತ ಕಾಲೋನಿವರೆಗೆ ಕಾಂಕ್ರಿಟೀಕರಣ 1.75 ಕೋಟಿ.

3. ಪರ್ಲ್oಡದಿಂದ ಎರ್ಮೆತ್ತೋಡಿಗೆ ಕಾಂಕ್ರಿಟೀಕರಣ 1ಕೋಟಿ.

4. ಜೀತ ಮುಕ್ತ ಕಾಲೋನಿಯಿಂದ ತೋಡಬಾಗಿಲಿನವರೆಗೆ ಕಾಂಕ್ರೀಟ್ ರಸ್ತೆ 75 ಲಕ್ಷ.

5. ಕರಂಬಾರು ಕ್ರಾಸ್ ನಿಂದ ತೋಡಬಾಗಿಲಿನವರಗೆ ಮರು ಡಾಂಬರೀಕರಣ 30ಲಕ್ಷ.

6. ಎರ್ಮೋತ್ತೋಡಿ ಅಂಗನವಾಡಿಯಿಂದ ಪಂಜಿದಬೆಟ್ಟಿನ ವರೆಗೆ ಕಾಂಕ್ರೀಟ್ ರಸ್ತೆ15ಲಕ್ಷ.

7. ಕರಂಬಾರು ಶಾಲೆಗೆ ಶೌಚಾಲಯ ರಚನೆ ಹಾಗೂ ಹಾಲ್ ಟೈಲ್ಸ್ ಅಳವಡಿಕೆ 12ಲಕ್ಷ.

8. ಶಾಲಾ ಬಳಿ ಕಾಂಕ್ರೀಟ್ ರಸ್ತೆ 10 ಲಕ್ಷ.

9. ದರ್ಬೆ ಅಂಗನವಾಡಿ ರಿಪೇರಿ ಮತ್ತು ಶೀಟು ಅಳವಡಿಕೆ 2 ಲಕ್ಷ.

*ಒಟ್ಟು ಮೊತ್ತ 9.44ಕೋಟಿ*

- Advertisement -
spot_img

Latest News

error: Content is protected !!