Monday, June 8, 2026
Homeತಾಜಾ ಸುದ್ದಿಮುಂಬೈ: ಗಣೇಶ ವಿಸರ್ಜನೆ ವೇಳೆ ಸಮುದ್ರಪಾಲಾದ ಮೂವರು ಮಕ್ಕಳು!

ಮುಂಬೈ: ಗಣೇಶ ವಿಸರ್ಜನೆ ವೇಳೆ ಸಮುದ್ರಪಾಲಾದ ಮೂವರು ಮಕ್ಕಳು!

- Advertisement -
- Advertisement -

ಮುಂಬೈ : ಗಣೇಶ ಮೂರ್ತಿ ವಿಸರ್ಜನೆ ವೇಳೆ ಐವರು ಮಕ್ಕಳು ಸಮುದ್ರದಲ್ಲಿ ಮುಳುಗಿದ ಘಟನೆ ವೆರ್ಸೋವಾ ಜೆಟ್ಟಿಯಲ್ಲಿ ರವಿವಾರ ರಾತ್ರಿ ನಡೆದಿದೆ.

ಈ ಪೈಕಿ ಇಬ್ಬರನ್ನು ರಕ್ಷಿಸಲಾಗಿದ್ದು, ಮೂವರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಬೃಹತ್ ಮುಂಬೈ ಮಹಾನಗರ ಪಾಲಿಕೆ ಪ್ರಕಟಿಸಿದೆ. ಜೊತೆಯಲ್ಲಿದ್ದ ಇಬ್ಬರನ್ನು ಸ್ಥಳೀಯರು ರಕ್ಷಿಸಿದ್ದು,
ಕೂಪರ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇದು ಗಣೇಶ ಮೂರ್ತಿ ವಿಸರ್ಜನೆಗೆ ನಿಗದಿಪಡಿಸಿದ ಸ್ಥಳ ಆಗಿರಲಿಲ್ಲ. ಜನರು ಇಲ್ಲಿಗೆ ಬರದಂತೆ ನಿರ್ಬಂಧಿಸಿದ್ದೆವು. ಆದಾಗ್ಯೂ ಕೆಲ ಕಿಡಿಗೇಡಿತನದಿಂದ ಗಣಪತಿ ವಿಸರ್ಜನೆಗಾಗಿ ಇಲ್ಲಿಗೆ ಅಕ್ರಮವಾಗಿ ಪ್ರವೇಶಿಸಿದ್ದರು ಎಂದು ಪೊಲೀಸ್ ಅಧಿಕಾರಿ ಮನೋಜ್ ವಾಮನ ಪೋಹನೇಕರ್ ಹೇಳಿದ್ದಾರೆ.

ನೌಕಾಪಡೆಯ ಡೈವರ್‌ಗಳ ಸಹಾಯವನ್ನು ಕೋರಲಾಗಿದೆ. ಅಗ್ನಿಶಾಮಕ ಯಂತ್ರ, ಒಂದು ದೋಣಿ, ಜೀವರಕ್ಷಕರು ಮತ್ತು ಇತರ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ’ ಎಂದು ಅಧಿಕಾರಿ ಅವರು ಮಾಹಿತಿ ನೀಡಿದ್ದಾರೆ.

- Advertisement -

Latest News

error: Content is protected !!