Monday, June 8, 2026
Homeತಾಜಾ ಸುದ್ದಿದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ: ಶೇ 29.91ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ!

ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ: ಶೇ 29.91ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ!

- Advertisement -
- Advertisement -

ಬೆಂಗಳೂರು : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷಾ ಫಲಿತಾಂಶ ಸೋಮವಾರ ಪ್ರಕಟವಾಗಿದೆ.ಆಗಸ್ಟ್‌- ಸೆಪ್ಟೆಂಬರ್‌ನಲ್ಲಿ ನಡೆದಿದ್ದ ವಾರ್ಷಿಕ ಪರೀಕ್ಷೆಯಲ್ಲಿ ಶೇ 29.91ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಒಟ್ಟು 18,413 ಅಭ್ಯರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. ಆ ಪೈಕಿ 17,470 ಖಾಸಗಿ ಅಭ್ಯರ್ಥಿಗಳು, 351 ಪುನಃರಾವರ್ತಿತ ಅಭ್ಯರ್ಥಿಗಳು ಹಾಗೂ 592 ಮಂದಿ ಹೊಸ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು ಎಂದು ಶಿಕ್ಷಣ ಇಲಾಖೆ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ಪಾಸಾದವರ ಪೈಕಿ, 580 ಮಂದಿ ಉನ್ನತ ಶ್ರೇಣಿ ಪಡೆದರೆ, 1,939 ಮಂದಿ ಪ್ರಥಮ ಶ್ರೇಣಿ, 1,578 ಮಂದಿ ದ್ವಿತೀಯ ಶ್ರೇಣಿ ಪಡೆದಿದ್ದಾರೆ.

592 ಹೊಸಬರ ಪೈಕಿ 556, ಪುನರಾವರ್ತಿತ 351ರಲ್ಲಿ 183, ಖಾಸಗಿ ವಿದ್ಯಾರ್ಥಿಗಳಲ್ಲಿ 17,470ರಲ್ಲಿ 4,768 ಮಂದಿ ಪಾಸಾಗಿದ್ದಾರೆ. ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದಿದ್ದ 12,203ರಲ್ಲಿ 3,912, ವಾಣಿಜ್ಯ ವಿಷಯದಲ್ಲಿ 6,114ರಲ್ಲಿ 1,527, ವಿಜ್ಞಾನದಲ್ಲಿ 96ರಲ್ಲಿ 68 ವಿದ್ಯಾರ್ಥಿಗಳ ಪಾಸಾಗಿದ್ದಾರೆ.

ಈ ಲಿಂಕ್‌ನಲ್ಲಿ http://www.karresults.nic.in/ ಫಲಿತಾಂಶ ಸಿಗಲಿದೆ.

- Advertisement -

Latest News

error: Content is protected !!