Friday, June 5, 2026
Homeಅಪರಾಧಕೊಡಗು: ಮಹಿಳೆಯರಿಬ್ಬರನ್ನು ಕಟ್ಟಿಹಾಕಿ ಚಿನ್ನಾಭರಣ ದರೋಡೆ

ಕೊಡಗು: ಮಹಿಳೆಯರಿಬ್ಬರನ್ನು ಕಟ್ಟಿಹಾಕಿ ಚಿನ್ನಾಭರಣ ದರೋಡೆ

- Advertisement -
- Advertisement -

ಕೊಡಗು: ತಡರಾತ್ರಿ ವೇಳೆ ಮನೆಯ ಬಾಗಿಲು ಒಡೆದು ಒಳಬಂದ ಕಳ್ಳರು, ಅಲ್ಲಿದ್ದ ಇಬ್ಬರು ಮಹಿಳೆಯರನ್ನು ಕಟ್ಟಿಹಾಕಿ ಲಕ್ಷಾಂತರ ಬೆಲೆಬಾಳುವ ಚಿನ್ನ ಮತ್ತು ನಗದು ದೋಚಿ ಪರಾರಿಯಾಗಿರುವ ಘಟನೆ ಮಡಿಕೇರಿಯ ಕೊಳಕೇರಿ ಗ್ರಾಮದಲ್ಲಿ ಬೊಮ್ಮಂಜಿಗೇರಿಯಲ್ಲಿ ನಡೆದಿದೆ.


ಬೆಂಗಳೂರಿನಲ್ಲಿರುವ ನಿವೃತ್ತ ನ್ಯಾಯಾಧೀಶರಾದ ವಾಂಜoಡ ಬೋಪಯ್ಯ ಅವರ ಸಹೋದಾರಿಯರಾದ ಜಾನಕಿ ಮತ್ತು ಅಮ್ಮಕ್ಕಿ ರಾತ್ರಿ ಮಲಗಿದ್ದ ಸಮಯದಲ್ಲಿ ಮನೆಗೆ ನುಗ್ಗಿದ ಕಳ್ಳರು ಚಾಕು ತೋರಿಸಿ ಅವರನ್ನು ಬೆದರಿಸಿದ್ದಾರೆ. ಮತ್ತು ಇಬ್ಬರನ್ನು ಹಗ್ಗದಲ್ಲಿ ಕಟ್ಟಿಹಾಕಿ, ಕೊಲೆ ಬೆದರಿಕೆ ಹಾಕಿದಾರಲ್ಲದೆ, ಮನೆಯಲ್ಲಿದ್ದ ಮುರೂವರ ಲಕ್ಷ ಬೆಲೆಬಾಳುವ ಚಿನ್ನಾಭರಣ ಮತ್ತು ಎರಡೂವರೆ ಲಕ್ಷ ನಗದು ಕದ್ದೊಯ್ದಿದ್ದಾರೆ.


ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದರೋಡೆಕೋರರ ಹುಡುಕಾಟದಲ್ಲಿ ಕಾರ್ಯಾಚರಣೆ ಕೈಗೊಂಡಿದ್ದಾರೆ.

- Advertisement -

Latest News

error: Content is protected !!