Saturday, June 6, 2026
Homeಅಪರಾಧಮಂಗಳೂರಿನಲ್ಲಿ ಪೊಲೀಸ್ ಗೆ ಚೂರಿ ಇರಿದ ಕಳ್ಳ

ಮಂಗಳೂರಿನಲ್ಲಿ ಪೊಲೀಸ್ ಗೆ ಚೂರಿ ಇರಿದ ಕಳ್ಳ

- Advertisement -
- Advertisement -

ಮಂಗಳೂರು: ಕಳ್ಳನೊಬ್ಬ ಪೊಲೀಸ್ ‌ಗೆ ಚೂರಿಯಿಂದ ಇರಿದು ಪರಾರಿಯಾದ ಘಟನೆ ನಗರದ ಸೆಂಟ್ರಲ್ ಮಾರ್ಕೆಟ್ ಬಳಿ ನಡೆದಿದೆ.

 ಕಳ್ಳನೊಬ್ಬ ತಾನು ಕಳ್ಳತನ ಮಾಡಿದ ಸಾಮಗ್ರಿ ಮಾರಾಟ ಮಾಡಲು ಬಂದಿದ್ದಾನೆ ಎಂಬ ಮಾಹಿತಿಯ ಮೇರೆಗೆ ಕದ್ರಿ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಆರೋಪಿಯನ್ನು ಹಿಡಿಯಲು ಮುಂದಾಗಿದ್ದಾರೆ. ಈ ವೇಳೆ ಪೊಲೀಸ್ ಸಿಬ್ಬಂದಿ ವಿನೋದ್‌ಗೆ ಆರೋಪಿ ಚೂರಿಯಂತಹ ಆಯುಧದಿಂದ ಇರಿದು ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಇರಿತಕ್ಕೊಳಗಾದ ವಿನೋದ್‌ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಕಾಸರಗೋಡು ಮೂಲದ ಕಳ್ಳ ಕದ್ದ ವಾಚ್‌ನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದನೆಂಬ ಮಾಹಿತಿ ಲಭ್ಯವಾಗಿತ್ತು. ಅದರಂತೆ ಆತನನ್ನು ಬಂಧಿಸಲು ತೆರಳಿದಾಗ ಘಟನೆ ನಡೆದಿದೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.

- Advertisement -

Latest News

error: Content is protected !!