Saturday, June 6, 2026
Homeಕರಾವಳಿಉಡುಪಿಉಡುಪಿ: ಮಸೀದಿಗಳಿಗೆ ಪ್ರವೇಶ ಕುರಿತು ಹೋರಾಟ ಮಾಡಲಿ, ಅದು ಬಿಟ್ಟು ಶಿಕ್ಷಣ ಸಂಸ್ಥೆಗಳಲ್ಲಿ ಹಕ್ಕು ಕೊಡಿ...

ಉಡುಪಿ: ಮಸೀದಿಗಳಿಗೆ ಪ್ರವೇಶ ಕುರಿತು ಹೋರಾಟ ಮಾಡಲಿ, ಅದು ಬಿಟ್ಟು ಶಿಕ್ಷಣ ಸಂಸ್ಥೆಗಳಲ್ಲಿ ಹಕ್ಕು ಕೊಡಿ ಎಂದು ಕೇಳುವ ಹಕ್ಕು ಅವರಿಗಿಲ್ಲ: ಯಶ್‌ಪಾಲ್ ಸುವರ್ಣ

- Advertisement -
- Advertisement -

ಉಡುಪಿ: ‘ಕ್ಯಾಂಪಸ್ ಪುಂಟ್ ಆಫ್ ಇಂಡಿಯಾ ದೇಶದ್ರೋಹಿ ಸಂಘಟನೆ. ನನ್ನನ್ನು ಗೂಂಡಾ ಎಂದು ಕರೆದಿದ್ದಕ್ಕೆ ನನಗೆ ಬೇಸರ ಇಲ್ಲ. ಹಾಗೆ ಕರೆದವನು ಪೇಯ್ಡ್ ನಾಯಕ’ ಎಂದು ಉಡುಪಿ ಸರಕಾರಿ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಯಶ್‌ಪಾಲ್ ಸುವರ್ಣ ಹೇಳಿಕೆ ನೀಡಿದ್ದಾರೆ.

ಉಡುಪಿಯಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು “ಹಿಜಾಬ್‌ಗೆ ಸಂಬಂಧಿಸಿ ಉಡುಪಿಯ ನಾಯಕರು ಹೇಳಿಕೆ ನೀಡಿಲ್ಲ. ಯಾರೋ ಪೇಯ್ಡ್ ನಾಯಕ ಪತ್ರಿಕಾ ಹೇಳಿಕೆ ನೀಡಿದ್ದಾನೆ. ಸಿ.ಎಫ್.ಐ ದೇಶಕ್ಕೆ ನೀಡಿರುವ ಕೊಡುಗೆ ಏನು, ಈ ಶಿಕ್ಷಣ ಸಂಸ್ಥೆಗೆ ಅವರು ನೀಡಿರುವ ಕೊಡುಗೆ ಏನು ಎಂಬುದನ್ನು ಮೊದಲು ಅರಿತುಕೊಳ್ಳಬೇಕು. ಅದು ಒಂದು ದೇಶದ್ರೋಹಿ ಸಂಘಟನೆ, ಅವರು ಭಾರತದ ಹಿತಾಸಕ್ತಿಗೆ ವಿರುದ್ಧವಾಗಿ ಕಲಸ ಮಾಡುತ್ತಾರೆ.

ಗಲಭೆ ಮಾಡಿ ಭಾರತದ ಆರ್ಥಿಕ ವ್ಯವಸ್ಥೆಗೆ ಹೊಡೆತ ಕೊಡುವುದು ಅವರ ಉದ್ದೇಶ, ಹೀಗಿರುವಾಗ ಅವರಿಗೆ ದೇಶದ ಬಗ್ಗೆ ಮಾತನಾಡುವ ಹಕ್ಕಿಲ್ಲ. ದೇಶದ ಮತಾಂಧ ಶಕ್ತಿಯನ್ನು ಒಟ್ಟು ಹಾಕಿಕೊಂಡು ಮಟ್ಟ ಹಾಕುವ ಕೆಲಸ ಮಾಡುತ್ತಿದೆ. ಅವರು ಮೊದಲು ತಮ್ಮ ಮನೆಯಲ್ಲಿ ಹಣು ಮಕ್ಕಳಿಗೆ ಹಕ್ಕು ತರಲಿ ಮಸೀದಿಗಳಿಗೆ ಪ್ರವೇಶ ಕುರಿತು ಹೋರಾಟ ಮಾಡಲಿ, ಅದು ಬಿಟ್ಟು ಶಿಕ್ಷಣ ಸಂಸ್ಥೆಗಳಲ್ಲಿ ಹಕ್ಕು ಕೊಡಿ ಎಂದು ಕೇಳುವ ಹಕ್ಕು ಅವರಿಗಿಲ್ಲ ಎಂದರು.

- Advertisement -

Latest News

error: Content is protected !!