Saturday, May 4, 2024
Homeತಾಜಾ ಸುದ್ದಿಹಿಜಾಬ್ ವಿಚಾರಣೆ ಮುಂದೂಡಿಕೆ; ಹೈಕೋರ್ಟ್ ಮಧ್ಯಂತರ ಆದೇಶ

ಹಿಜಾಬ್ ವಿಚಾರಣೆ ಮುಂದೂಡಿಕೆ; ಹೈಕೋರ್ಟ್ ಮಧ್ಯಂತರ ಆದೇಶ

spot_img
- Advertisement -
- Advertisement -

ಹಲವಾರು ಗೊಂದಲಗಳನ್ನು ಸೃಷ್ಟಿಸಿರುವ ಹಿಜಾಬ್ ವಿವಾದ  ಮಹತ್ವದ ಘಟ್ಟ ತಲುಪಿದ್ದು, ಈ ವಿಚಾರಣೆಯನ್ನು ಹೈಕೋರ್ಟ್ ಅಂಗಳದಲ್ಲಿ ಸೋಮವಾರಕ್ಕೆ ಮುಂದೂದಾಲಾಗಿದೆ, ಇದರ ನಡುವೆ ಮಧ್ಯಂತರ ಆದೇಶ ನೀಡಲಾಗಿದೆ.

ಆದೇಶದಂತೆ ಹೈಕೋರ್ಟ್ ಅಂತಿಮ ತೀರ್ಪು ನೀಡುವ ವರೆಗೂ ಶಾಲೆಗಳಲ್ಲಿ ಯಾವುದೇ ಧಾರ್ಮಿಕ ಸಂಕೇತಗಳನ್ನು ಬಳಸುವಂತಿಲ್ಲ. ಅಂದರೆ ಹಿಜಾಬ್ ಅಥವಾ ಶಾಲು ಆಗಲೀ ಯಾವುದೇ ಧಾರ್ಮಿಕ ಗುರುತುಗಳನ್ನು ಮುಂದಿನ ಆದೇಶದ ವರೆಗೂ ಬಳಸಬಾರದು. ರಾಜ್ಯದಲ್ಲಿ ಶಾಂತಿ ಮರಳುವ ನಿಟ್ಟಿನಲ್ಲಿ ಮಧ್ಯಂತರ ಆದೇಶ ನೀಡಲಾಗುತ್ತಿದೆ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದ ತ್ರಿಸದಸ್ಯ ಪೀಠ ಆದೇಶ ಹೊರಡಿಸಿದೆ.

ಜೊತೆಗೆ ರಾಜ್ಯಾದ್ಯಂತ ಶಾಲೆ, ಕಾಲೇಜುಗಳನ್ನು ಮತ್ತೆ ಆರಂಭಿಸಬೇಕು ಎಂದು ಹೈಕೋರ್ಟ್ ಆದೇಶ ಮಾಡಿದೆ. ಧಾರ್ಮಿಕ ಸ್ವಾತಂತ್ರ್ಯ, ಸ್ತ್ರೀಯರ ಶಿಕ್ಷಣ ಹೀಗೆ ಗಂಭೀರ ವಿಚಾರ ಆಗಿರುವುದರಿಂದ ಈ ಬಗ್ಗೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದ್ದು, ಆದಷ್ಟು ಬೇಗ ತೀರ್ಪು ನೀಡಲಾಗುವುದು ಎಂದು ಹೈಕೋರ್ಟ್ ತಿಳಿಸಿದೆ.

ದೇವದತ್ ಕಾಮತ್, ಸಂಜಯ್ ಹೆಗ್ಡೆ ಸೇರಿದಂತೆ ಕೆಲವು ಹಿರಿಯ ವಕೀಲರು ಹೈಕೋರ್ಟಿನಲ್ಲಿ ಹಿಜಾಬ್ ಪರವಾಗಿ ವಿವಿಧ ತೀರ್ಪುಗಳನ್ನು ಆಧರಿಸಿ ವಾದ ಮಂಡಿಸಿದ್ದರು. ಈ ನಡುವೆ, ಮಧ್ಯಂತರ ತೀರ್ಪು ನೀಡಬೇಕು ಅರ್ಜಿದಾರರು ಕೇಳಿಕೊಂಡಿದ್ದರು. ಆದರೆ ರಾಜ್ಯ ಸರಕಾರದ ಪರ ಆದರೆ, ಎಂದು ರಾಜ್ಯ ವಕೀಲರು ಮಧ್ಯಂತರ ಆದೇಶ ನೀಡಬಾರದು ಎಂದು ಒತ್ತಾಯಿಸಿದ್ದರು.

- Advertisement -
spot_img

Latest News

error: Content is protected !!