Thursday, May 2, 2024
Homeತಾಜಾ ಸುದ್ದಿಶಾಲೆ ಆರಂಭವಾದ್ರೆ ಇರಲ್ಲ ಬಿಸಿಯೂಟ: ಮಕ್ಕಳು ಮನೆಯಿಂದಲೇ ತರಬೇಕು ಊಟ

ಶಾಲೆ ಆರಂಭವಾದ್ರೆ ಇರಲ್ಲ ಬಿಸಿಯೂಟ: ಮಕ್ಕಳು ಮನೆಯಿಂದಲೇ ತರಬೇಕು ಊಟ

spot_img
- Advertisement -
- Advertisement -

ಬೆಂಗಳೂರು: ಇಷ್ಟು ವರ್ಷ ಸರ್ಕಾರಿ ಶಾಲಾ ಮಕ್ಕಳಿಗೆ ಶಾಲೆಯಲ್ಲೇ ಬಿಸಿಯೂಟ ನೀಡಲಾಗುತ್ತಿತ್ತು.ಆದ್ರೆ ಈ ಬಾರಿ ಶಾಲೆ ಆರಂಭವಾದ್ಮೇಲೆ ಮಕ್ಕಳಿಗೆ ಬಿಸಿಯೂಟವಿರೋದಿಲ್ಲ. ಬದಲಾಗಿ ಅವರಿಗೆ ನೇರವಾಗಿ ಆಹಾರವನ್ನು ಪೂರೈಕೆ ಮಾಡೋದಕ್ಕೆ ಸರ್ಕಾರ ನಿರ್ಧರಿಸಿದೆ.

ಒಂದರಿಂದ ಐದನೇ ತರಗತಿಯ ಮಕ್ಕಳಿಗೆ ದಿನಕ್ಕೆ 100 ಗ್ರಾಂ ಅಕ್ಕಿ ಅಥವಾ ಗೋಧಿ ಹಾಗೂ 58 ಗ್ರಾಂ ತೊಗರಿಬೇಳೆ ನೀಡಲಾಗುವುದು. 6 ರಿಂದ 10 ನೇ ತರಗತಿಯ ಮಕ್ಕಳಿಗೆ ದಿನಕ್ಕೆ 150 ಗ್ರಾಂ ಅಕ್ಕಿ ಅಥವಾ ಗೋಧಿ, 87 ಗ್ರಾಂ ಬೇಳೆ ವಿತರಿಸಲಾಗುತ್ತದೆ.

ಕೊರೊನಾದಿಂದಾಗಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಮಕ್ಕಳಿಗೆ ಬಿಸಿಯೂಟ ನೀಡದಿರಲು ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತಾಗಿ ನ್ಯಾಯಾಲಯಕ್ಕೆ ಕೂಡ ಮಾಹಿತಿ ನೀಡಲಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಕೊರೋನಾ ಕಾರಣದಿಂದ ಬಿಸಿಯೂಟದ ಬದಲು ಆಹಾರಧಾನ್ಯವನ್ನು ನೀಡಲು ಮುಂದಾಗಿದೆ.

ಜನವರಿ 1 ರಿಂದ ಎಸ್‌ಎಸ್‌ಎಲ್ಸಿ ಮತ್ತು 12ನೇ ತರಗತಿ ಆರಂಭವಾಗುವ ಸಾಧ್ಯತೆಯಿದೆ. ವಿದ್ಯಾಗಮ ಯೋಜನೆಯಡಿ 1ರಿಂದ 9ನೇ ತರಗತಿಗಳು ಶಾಲೆಯ ಆವರಣದಲ್ಲಿ ನಡೆದರೂ ಬಿಸಿಯೂಟ ನೀಡುವುದಿಲ್ಲ. ಮಕ್ಕಳು ಮನೆಯಿಂದಲೇ ಊಟ ತರಬೇಕಿದೆ. ಬಿಸಿಯೂಟ ಬದಲಿಗೆ ಆಹಾರಧಾನ್ಯ ನೀಡಲಾಗುವುದು ಎಂದು ಹೇಳಲಾಗಿದೆ.

- Advertisement -
spot_img

Latest News

error: Content is protected !!