Friday, June 5, 2026
Homeಕರಾವಳಿಮಂಗಳೂರು; ಮನೆಯಿಂದ ಚಿನ್ನಾಭರಣ, ನಗದು ದೋಚಿದ ಆರೋಪಿಯ ಬಂಧನ

ಮಂಗಳೂರು; ಮನೆಯಿಂದ ಚಿನ್ನಾಭರಣ, ನಗದು ದೋಚಿದ ಆರೋಪಿಯ ಬಂಧನ

- Advertisement -
- Advertisement -

ಮಂಗಳೂರು; ಮನೆಯಿಂದ ಚಿನ್ನಾಭರಣ ದೋಚಿದ ಆರೋಪಿಯನ್ನು ಬಂಧಿಸಿರುವ ಘಟನೆ ಸುರತ್ಕಲ್ ನಲ್ಲಿ ನಡೆದಿದೆ.ಸುರತ್ಕಲ್ ಮುಂಚೂರು ಸಮೀಪದ ರೈಲ್ವೇ ಹಳಿ ಬಳಿಯ ಬಾಡಿಗೆ ಮನೆಯೊಂದರಿಂದ ಚಿನ್ನಾಭರಣ ನಗದು ದೋಚಿದ್ದ ಓರ್ವನನ್ನು ಹೊಸಕೋಟೆ ನಿವಾಸಿ ಜಂಬಯ್ಯ (24) ಎಂಬಾತನನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.

ಬಂಧಿತನಿಂದ ಕೃತ್ಯಕ್ಕೆ ಬಳಸಿದ್ದ ಕಾರು ಹಾಗೂ ಮೊಬೈಲ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ‌.ಸುರತ್ಕಲ್ ಮುಂಚೂರು ಸಮೀಪದ ರೈಲ್ವೇ ಹಳಿ ಬಳಿಯ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಕಲ್ಲೇಶ್ವರ ಶೇಖಪ್ಪ ನೆಲವಡಿ ದಂಪತಿ ಕೆಲಸಕ್ಕೆ ಹೋಗಿ ಹಿಂದಿರುಗಿದಾಗ ಮನೆಯ ಬಾಗಿಲಿನ ಬೀಗ ಒಡೆದು 2.50 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಮತ್ತು 50 ಸಾವಿರ ರೂ. ದೋಚಿ ಪರಾರಿಯಾಗಿದ್ದರು.

ಈ ಕುರಿತು ಕಲ್ಲೇಶಪ್ಪ ಸುರತ್ಕಲ್ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಕಾರ್ಯಾಚರಣೆಗೆ ಇಳಿದ ಪೊಲೀಸ್ ತಂಡ ಪಡುಬಿದ್ರೆ ನಂದಿಕೂರು ಬಳಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ .

- Advertisement -

Latest News

error: Content is protected !!