Saturday, June 6, 2026
Homeಕರಾವಳಿಉಡುಪಿಉಡುಪಿ: ಆನ್‌ಲೈನ್ ನಲ್ಲಿ ಟಾಸ್ಕ್ ನೆಪದಲ್ಲಿ ಮಹಿಳೆಗೆ ಲಕ್ಷಾಂತರ ರೂಪಾಯಿ ವಂಚನೆ

ಉಡುಪಿ: ಆನ್‌ಲೈನ್ ನಲ್ಲಿ ಟಾಸ್ಕ್ ನೆಪದಲ್ಲಿ ಮಹಿಳೆಗೆ ಲಕ್ಷಾಂತರ ರೂಪಾಯಿ ವಂಚನೆ

- Advertisement -
- Advertisement -

ಉಡುಪಿ: ಆನ್‌ಲೈನ್ ನಲ್ಲಿ ಟಾಸ್ಕ್ ನೆಪದಲ್ಲಿ ಮಹಿಳೆಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೀಣಾ(35) ಎಂಬವರ ವಾಟ್ಸಾಪ್‌ಗೆ ಎ.9ರಂದು ಗೂಗಲ್ ರಿವ್ಯೂ ಮಾಡಿದರೆ 50 ರೂ. ನೀಡಲಾಗುವುದು ಎಂಬ ಸಂದೇಶ ಬಂದಿದ್ದು ಅದನ್ನು ನಂಬಿದ ಅವರು ಗೂಗಲ್ ರಿವ್ಯೂ ಮಾಡಿದ್ದಾರೆ.

ಬಳಿಕ ಆರೋಪಿ, ವೀಣಾ ಅವರಿಗೆ ವಿವಿಧ ಟಾಸ್ಕ್ ಗಳನ್ನು ನೀಡಿ ನಂಬಿಸಿ ಎ.9ರಿಂದ ಎ.12ರ ಮಧ್ಯಾವಧಿ ಯಲ್ಲಿ ಒಟ್ಟು 2,21,000ರೂ. ತನ್ನ ಖಾತೆಗೆ ವರ್ಗಾವಣೆ ಮಾಡಿ ವಂಚಿಸಿರುವುದಾಗಿ ದೂರಲಾಗಿದೆ.

- Advertisement -

Latest News

error: Content is protected !!