Friday, June 5, 2026
Homeಕರಾವಳಿಉಡುಪಿಒಂಟಿ ಮಹಿಳೆಯರಿದ್ದ ಮನೆಗೆ ಕನ್ನ: ಉಡುಪಿಯಲ್ಲಿ ಇಬ್ಬರ ಬಂಧನ

ಒಂಟಿ ಮಹಿಳೆಯರಿದ್ದ ಮನೆಗೆ ಕನ್ನ: ಉಡುಪಿಯಲ್ಲಿ ಇಬ್ಬರ ಬಂಧನ

- Advertisement -
- Advertisement -

ಉಡುಪಿ:  ಒಂಟಿ ಮಹಿಳೆಯರಿದ್ದ ಮನೆಗೆ ಕನ್ನ ಹಾಕುತ್ತಿದ್ದ ಮೂವರಲ್ಲಿ ಇಬ್ಬರನ್ನು ಬಂಧಿಸಿದ ಘಟನೆ ಬ್ರಹ್ಮಾವರ ಬಳಿಯ ಶಿರಿಯಾ ಎಂಬಲ್ಲಿ ನಡೆದಿದೆ.

ಬಂಧಿತ ಆರೋಪಿಗಳನ್ನು ಸುರೇಶ್, ಬೆಂಗಳೂರು ಮೂಲದ ರಾಕೇಶ್ ಎಂದು ಗುರುತಿಸಲಾಗಿದೆ. ಮತ್ತೊಬ್ಬ ನಂದೀಶ್ ಎಂಬಾತ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಇವರು ಒಂಟಿ ಮಹಿಳೆಯರಿದ್ದ ಮನೆಗೆ ಬಂದು ವಸ್ತುಗಳನ್ನು ದೋಚುತ್ತಿದ್ದರು. ಇದನ್ನು ಪ್ರಶ್ನಿಸಿದ ಸ್ಥಳಿಯರಿಗೆ ಚೂರಿ ತೋರಿಸಿ ಬೆದರಿಕೆ ಹಾಕಿ ಪರಾರಿಯಾಗಿದ್ದರು. ಈ ಕುರಿತು ಬ್ರಹ್ಮಾವರ ಠಾಣೆಗೆ ದೂರು ನೀಡಲಾಗಿದ್ದು, ಸ್ಥಳೀಯರು ಹಾಗೂ ಪೊಲೀಸರು ಹುಡುಕಾಟ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ, ಈ ವೇಳೆ ಓರ್ವ ಪರಾರಿಯಾಗಿದ್ದಾನೆ.

ಸುರೇಶ್ ಎಂಬಾತ ಮಂಗಳೂರಿನವನಾಗಿದ್ದು, ಉಳಿದಿಬ್ಬರು ಬೆಂಗಳೂರಿನ ಆರೋಪಿಗಳಿಗೆ ಈತ ಮಾಹಿತಿ ನೀಡುತ್ತಿದ್ದನು ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!