Saturday, June 27, 2026
Homeಕರಾವಳಿಪ್ರತಿವರ್ಷದಂತೆ ಈ ವರ್ಷವೂ ಕಡಬದಿಂದ ಟ್ರಿಪ್ ಹೊರಟ ಕಾಡಾನೆ: ಈ ಬಾರಿ ಆನೆಯ ಜರ್ನಿ ಹೇಗಿತ್ತು...

ಪ್ರತಿವರ್ಷದಂತೆ ಈ ವರ್ಷವೂ ಕಡಬದಿಂದ ಟ್ರಿಪ್ ಹೊರಟ ಕಾಡಾನೆ: ಈ ಬಾರಿ ಆನೆಯ ಜರ್ನಿ ಹೇಗಿತ್ತು ಗೊತ್ತಾ?

- Advertisement -
- Advertisement -

ಸುಳ್ಯ:  ವರ್ಷಕ್ಕೊಮ್ಮೆ ಸ್ವಲ್ಪ ಛೇಂಜ್ ಇರ್ಲಿ ಫಾರಿನ್ ಟ್ರಿಪ್ಪೋ,,, ಇಲ್ಲಾ ಯಾವುದೋ ಪ್ರವಾಸಿ ತಾಣಗಳಿಗೆ ಹೋಗೋ ಅದೆಷ್ಟೋ ಮಂದಿಯನ್ನು ನಾವು ನೋಡಿದ್ದೇವೆ. ಇದೇ ರೀತಿ ಕಡಬದಿಂದ ಪ್ರತಿ ವರ್ಷ ಏಕಾಂಗಿಯಾಗಿ ಕಾಡಾನೆಯೊಂದು ಸೋಲೋ ಟ್ರಿಪ್ ಹೋಗುತ್ತೆ. ಈ ವರ್ಷ ಕೂಡ ವರ್ಷ ಪ್ರತಿಯಂತೆ ಆನೆ ಟ್ರಿಪ್ ಹೊರಟಿದೆ.

ವಿಶೇಷ ಅಂದ್ರೆ ಕಳೆದ ಕೆಲವು ವರ್ಷಗಳಿಂದ ಈ ಕಾಡಾನೆ ಕಡಬ ಅರಣ್ಯ ಪ್ರದೇಶದಿಂದ ಸುಬ್ರಮಣ್ಯ ವಲಯ, ಪಂಜ ವಲಯದ ಮೂಲಕ ಸಾಗಿ ಪೆರಾಜೆ ಮೂಲಕ ಭಾಗಮಂಡಲಕ್ಕೆ ತೆರಳುತ್ತೆ. ಒಂದೇ  ದಾರಿಯಲ್ಲಿ ಪ್ರತಿ ವರ್ಷ ಸಾಗುತ್ತೆ. ಅದರಂತೆ ನಿನ್ನೆ ಸುಳ್ಯದ ಪೆರಾಜೆಯ ಬಿಳಿಯಾರು ಮೂಲಕ ಆನೆ ಭಾಗಮಂಡಲದತ್ತ ಪ್ರಯಾಣಿಸಿದ್ದು ಅದರ ಲಾಂಗ್ ಟ್ರಿಪ್ ನ ವಿಡಿಯೋ ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ನು ಪ್ರತಿವರ್ಷ ಆನೆ ಒಂದೇ ದಾರಿಯಲ್ಲಿ  ಸಾಗುತ್ತಿದೆ. ಅದೆಷ್ಟೋ ಮನೆಗಳ ಅಂಗಳದಲ್ಲೇ ಆನೆ ಸಂಚರಿಸುತ್ತೆ. ಆದ್ರೂ ಇದುವರೆಗೂ ಯಾರಿಗೂ ಆನೆ ತೊಂದರೆ ಕೊಟ್ಟಿಲ್ಲ ಎನ್ನುತ್ತಾರೆ ಸ್ಥಳೀಯರು. ಆದ್ರೆ ಪ್ರಾಣಿಗಳಿಗೆ ಇರುವ ಬುದ್ಧಿ ಮನುಷ್ಯನಿಗೆ ಇಲ್ಲ ಅನ್ನೋದು ನಿಮಗೆ ವಿಡಿಯೋ ನೋಡಿದ್ರೆ ಗೊತ್ತಾಗುತ್ತೆ. ಆನೆ ಹತ್ತಿರವೇ ಹೋಗಿ ಜನ ವಿಡಿಯೋ ಮಾಡುತ್ತಿರೋದು, ಗದ್ದಲ ಎಬ್ಬಿಸಿರೋದು ನೋಡಿದ್ರೆ ಮನುಷ್ಯ ಪ್ರಾಣಿಗಿಂತ ಕಡೆ ಅನ್ನೋದನ್ನು ಸಾಬೀತು ಪಡಿಸುತ್ತಿದೆ.

- Advertisement -

Latest News

error: Content is protected !!