Saturday, April 20, 2024
Homeತಾಜಾ ಸುದ್ದಿಅಪರೂಪದ ಫೋಟೋ: ತಮಿಳುನಾಡು ಮಾಜಿ ಸಿಎಂ ಜಯಲಲಿತಾ-ನಿರ್ಮಲಾ ಸೀತಾರಾಮನ್ ಬಾಲ್ಯದ​ ಗೆಳತಿಯರಾ?

ಅಪರೂಪದ ಫೋಟೋ: ತಮಿಳುನಾಡು ಮಾಜಿ ಸಿಎಂ ಜಯಲಲಿತಾ-ನಿರ್ಮಲಾ ಸೀತಾರಾಮನ್ ಬಾಲ್ಯದ​ ಗೆಳತಿಯರಾ?

spot_img
- Advertisement -
- Advertisement -

ಚೆನ್ನೈ: ಚಿತ್ರರಂಗದಲ್ಲಿ ಬಾಲನಟಿಯಾಗಿ ಬೆಳೆದು ಯೌವನದಲ್ಲಿ ಚಿತ್ರರಂಗದ ಖ್ಯಾತನಾಮ ಚಿತ್ರಗಳಲ್ಲಿ ಪ್ರಮುಖ ಭೂಮಿಕೆಯಲ್ಲಿ ನಟಿಸಿ ನಂತರ ರಾಜಕಾರಣದಲ್ಲಿ ಮುಖ್ಯಮಂತ್ರಿಯಾಗಿ ಮಿಂಚಿದ ಜಯಲಲಿತಾ ಮತ್ತು ಭಾರತೀಯ ರಾಜಕಾರಣಿ, ಅವರು ಪ್ರಸ್ತುತ ಭಾರತದ ಹಣಕಾಸು ಮಂತ್ರಿಯಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ರಾಜಕಾರಣಿ ನಿರ್ಮಲಾ ಸೀತಾರಾಮನ್​ ಬಾಲ್ಯದ ಸ್ನೇಹಿತರು ಎಂದು ಹೇಳುವ ಫೋಟೋ ಒಂದು ಕಳೆದ ಕೆಲ ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿತ್ತು.

ಎಐಎಡಿಎಂಕೆ ನಾಯಕಿಯಾಗಿದ್ದ ಸೆಲ್ವಿ ಜೆ.ಜಯಲಲಿತಾ ಮತ್ತು ಬಿಜೆಪಿಯ ಹಿರಿಯ ನಾಯಕಿ ನಿರ್ಮಲಾ ಸೀತಾರಾಮನ್ ಇಬ್ಬರು ದಕ್ಷಿಣ ಭಾರತ ಮೂಲದವರಾಗಿದ್ದರಿಂದ ಈ ಅಪರೂಪದ ಫೋಟೋ ಸತ್ಯ ಎನ್ನುವಷ್ಟು ವೈರಲ್ ಆಗಿತ್ತು. ಈ ಬಗ್ಗೆ ಆಂಗ್ಲ ಸುದ್ದಿ ಸಂಸ್ಥೆ ಇಂಡಿಯಾ ಟುಡೆ ಆಯಂಟಿ ಫೇಕ್​ನ್ಯೂಸ್​ ವಾರ್​ ರೂಮ್​ ತಂಡ ಮಾಡಿರುವ ಫ್ಯಾಕ್ಟ್​ಚೆಕ್​ ಮೂಲಕ ಈ ಫೋಟೋದ ಹಿಂದಿರುವ ಸತ್ಯಂಶ ಬಯಲಾಗಿದೆ. ಫೋಟೋದಲ್ಲಿ ಜಯಲಲಿತಾ ಜತೆ ಇರುವುದು ನಿರ್ಮಲಾ ಸೀತಾರಾಮನ್​ ಅಲ್ಲ, ಬದಲಾಗಿ ತಮಿಳಿನ ಸಾಹಿತಿ ಶಿವಶಂಕರಿ ಎಂದು ತಿಳಿದುಬಂದಿದೆ.

ಅಂದಹಾಗೆ ಜಯಲಲಿತಾ ಮತ್ತು ಶಿವಶಂಕರಿ ಒಂದು ಕಾಲದಲ್ಲಿ ಆತ್ಮೀಯ ಸ್ನೇಹಿತರು​. ರವಿ ವರ್ಮಾ ಎಂಬ ಫೋಟೋಗ್ರಾಫರ್​ ತಮಿಳು ಮ್ಯಾಗಜಿನ್​ ಒಂದಕ್ಕೆ ತೆಗೆದ ಫೋಟೋ ಇದಾಗಿದೆ. ಫೋಟೋದ ಬಗ್ಗೆ ಗೊತ್ತಿರುವ ಒಂದಷ್ಟು ಮಂದಿ ಕಾಮೆಂಟ್ ನಲ್ಲಿ ಕೆಳಗೆ ಕ್ಲಿಕ್ಡ್​​ ಬೈ ಸ್ಟಿಲ್ಸ್​ ರವಿ ಎಂದು ಬರೆದಿದ್ದಾರೆ.

- Advertisement -
spot_img

Latest News

error: Content is protected !!