Sunday, June 7, 2026
Homeಕರಾವಳಿಪುತ್ತೂರು: ಯಳ್ತಿಮಾರ್ ಇಂಡಸ್ಟ್ರೀಸ್‌ನ ಮಾಲಕ ರಘುರಾಮ ಶೆಣೈ ನಿಧನ

ಪುತ್ತೂರು: ಯಳ್ತಿಮಾರ್ ಇಂಡಸ್ಟ್ರೀಸ್‌ನ ಮಾಲಕ ರಘುರಾಮ ಶೆಣೈ ನಿಧನ

- Advertisement -
- Advertisement -

ಪುತ್ತೂರು: ತಾಲೂಕಿನಾದ್ಯಂತ ಹೆಸರು ಸಂಪಾದಿಸಿರುವ ನಗರದ ಪ್ರತಿಷ್ಠಿತ ಯಳ್ತಿಮಾರ್ ಇಂಡಸ್ಟ್ರೀಸ್‌ನ ಮಾಲಕ ಹಿರಿಯ ಉದ್ಯಮಿ ರಘುರಾಮ ಶೆಣೈ(60ವ) ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಪುತ್ತೂರಿನಲ್ಲಿ ಹಲವಾರು ವರ್ಷಗಳಿಂದ ಪ್ರಸಿದ್ಧ ಉದ್ಯಮಿಯಾಗಿರುವ ಕಲ್ಲಾರೆ ನಿವಾಸಿ ರಘುರಾಮ ಶೆಣೈ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಇಂದು ಬೆಳಿಗ್ಗೆ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ಚಿಕಿತ್ಸೆಗೆ ಸ್ಪಂಧಿಸದೆ ನಿಧನರಾದರು.

ಮೃತರು ಪತ್ನಿ ಜಯಲಕ್ಷ್ಮೀ ಶೆಣೈ, ಪುತ್ರ ಇಂಜಿನಿಯರ್ ಸೂರಜ್ ಶೆಣೈ ಅವರನ್ನು ಅಗಲಿದ್ದಾರೆ.

- Advertisement -

Latest News

error: Content is protected !!