Saturday, April 27, 2024
Homeತಾಜಾ ಸುದ್ದಿತಮಿಳುನಾಡು ವಿರೋಧಪಕ್ಷ ಎಐಎಡಿಎಂಕೆ ಪಕ್ಷದಲ್ಲಿ ತೀವ್ರ ಬಿಕ್ಕಟ್ಟು: ಸಭೆಯಿಂದ ಹೊರ ನಡೆದ ಪನ್ನೀರ್‌ಸೆಲ್ವಂ ಮೇಲೆ ಬಾಟಲಿ...

ತಮಿಳುನಾಡು ವಿರೋಧಪಕ್ಷ ಎಐಎಡಿಎಂಕೆ ಪಕ್ಷದಲ್ಲಿ ತೀವ್ರ ಬಿಕ್ಕಟ್ಟು: ಸಭೆಯಿಂದ ಹೊರ ನಡೆದ ಪನ್ನೀರ್‌ಸೆಲ್ವಂ ಮೇಲೆ ಬಾಟಲಿ ಎಸೆತ

spot_img
- Advertisement -
- Advertisement -

ಚೆನೈ: ತಮಿಳುನಾಡಿನಲ್ಲಿ ಪ್ರಮುಖ ವಿರೋಧ ಪಕ್ಷ ಎಐಎಡಿಎಂಕೆಯಲ್ಲಿ ಆಂತರಿಕ ಬಿಕ್ಕಟ್ಟು ಉಲ್ಬಣಗೊಂಡಿದೆ. ತಮ್ಮ ಎದುರಾಳಿ ಎಡಪ್ಪಾಡಿ ಪಳನಿಸ್ವಾಮಿ ಅವರು ಪಕ್ಷದಲ್ಲಿ ‘ಏಕ ನಾಯಕತ್ವ’ಕ್ಕೆ ಬೇಡಿಕೆ ಇರಿಸಿದ್ದು, ಅದಕ್ಕೆ ಅನೇಕ ಹಿರಿಯ ನಾಯಕರು ಬೆಂಬಲ ಸೂಚಿಸಿದ್ದರಿಂದ ಅಸಮಾಧಾನಗೊಂಡಿರುವ ಪಕ್ಷದ ಮುಖ್ಯಸ್ಥ ಓ ಪನ್ನೀರ್‌ಸೆಲ್ವಂ ಅವರು ಮಹತ್ವದ ಸಭೆಯಿಂದ ಹೊರನಡೆದಿದ್ದಾರೆ.

ಎಐಎಡಿಎಂಕೆ ಸಾಮಾನ್ಯ ಮಂಡಳಿ ಸಭೆ ಗುರುವಾರ ಆರಂಭವಾಗುತ್ತಿದ್ದಂತೆಯೇ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು. 23 ಪೂರ್ವ ನಿರ್ಧರಿತ ನಿರ್ಣಯಗಳನ್ನು ಕೈಗೆತ್ತಿಕೊಂಡಾಗ ಅವುಗಳನ್ನು ಅನುಮೋದಿಸುವ ಪ್ರಕ್ರಿಯೆಲ್ಲಿ ಜೋರಾದ ಘೋಷಣೆ, ಕೂಗಾಟ ನಡೆಯಿತು. ಕೊನೆಗೆ ಪನ್ನೀರ್‌ಸೆಲ್ವಂ ಮತ್ತು ಅವರ ಬೆಂಬಲಿಗರು ಹೊರ ಹೋಗುವಾಗ ಅವರ ಮೇಲೆ ಬಾಟಲಿಗಳನ್ನು ಎಸೆಯಲಾಯಿತು

ಒಪಿಎಸ್ ಎಂದೇ ಹೆಸರಾಗಿರುವ ಒ ಪನ್ನೀರ್‌ಸೆಲ್ವಂ ಅವರು ಒಂದು ನಿರ್ಣಯವನ್ನು ಮಂಡಿಸಿದರೆ, ಇಪಿಎಸ್ ಎಂದು ಹೆಸರಾದ ಇ. ಪಳನಿಸ್ವಾಮಿ ಅವರು ಎರಡನೇ ನಿರ್ಣಯ ಮಂಡಿಸಿದರು. ನಿರ್ಣಯ ಮಂಡನೆ ವೇಳೆ ಒಪಿಎಸ್ ಅವರನ್ನು ಇಪಿಎಸ್, ‘ಸಹೋದರ’ ಎಂದು ಕರೆದರು. ಆದರೆ, ಎಲ್ಲ ನಿರ್ಣಯಗಳನ್ನೂ ಸಾಮಾನ್ಯ ಮಂಡಳಿ ಸಭೆ ತಿರಸ್ಕರಿಸಿದೆ ಎಂದು ಇತ್ತೀಚೆಗೆ ರಾಜ್ಯಸಭೆಗೆ ಆಯ್ಕೆಯಾದ ಪಕ್ಷದ ಹಿರಿಯ ನಾಯಕ ಷಣ್ಮುಗಂ ತಿಳಿಸಿದ್ದಾರೆ. ಪ್ರಸ್ತಾಪಿತ ಎಲ್ಲ 23 ನಿರ್ಣಯಗಳನ್ನು ಜನರಲ್ ಕೌನ್ಸಿಲ್ ಸದಸ್ಯರು ತಿರಸ್ಕರಿದ್ದಾರೆ. ಅವರ ಒಂದೇ ಬೇಡಿಕೆ ಎಂದರೆ ಏಕ ನಾಯಕತ್ವದ್ದಾಗಿತ್ತು ಎಂದು ಉಪ ಕಾರ್ಯದರ್ಶಿ ಕೆಪಿ ಮುನಿಸ್ವಾಮಿ ತಿಳಿಸಿದ್ದಾರೆ. ಸಭೆಗೂ ಮುನ್ನ ಪನ್ನೀರ್‌ಸೆಲ್ವಂ ಮತ್ತು ಪಳನಿಸ್ವಾಮಿ ಬೆಂಬಲಿಗರ ನಡುವೆ ವಾಗ್ವಾದ ನಡೆದಿತ್ತು. ಪರಸ್ಪರ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು. ಒಪಿಎಸ್ ಅವರು ತಮ್ಮ ಬೆಂಬಲಿಗರ ಜತೆ ಸ್ಥಳಕ್ಕೆ ಬಂದರೆ, ಇಪಿಎಸ್ ಅವರನ್ನು ಅವರ ಬೆಂಬಲಿಗರು ವೇದಿಕೆಗೆ ಸ್ವಾಗತಿಸುವಾಗ ನಾಟಕೀಯ ರೀತಿಯಲ್ಲಿ ತಳ್ಳಾಟಗಳು ನಡೆದವು

- Advertisement -
spot_img

Latest News

error: Content is protected !!