Saturday, June 6, 2026
Homeತಾಜಾ ಸುದ್ದಿಪತ್ನಿ ಮತ್ತು ಆಕೆಯ ಗೆಳತಿಯರ ಕಾಟ ತಡೆಯಲಾರದೆ ಪತಿ ಹಾಗೂ ಮಗ ಆತ್ಮಹತ್ಯೆ

ಪತ್ನಿ ಮತ್ತು ಆಕೆಯ ಗೆಳತಿಯರ ಕಾಟ ತಡೆಯಲಾರದೆ ಪತಿ ಹಾಗೂ ಮಗ ಆತ್ಮಹತ್ಯೆ

- Advertisement -
- Advertisement -

ಕೇರಳ: ಪತ್ನಿ ಮತ್ತು ಆಕೆಯ ಗೆಳತಿಯರ ಕಾಟ ತಾಳಲಾರದೆ ತನ್ನ ಕಾರಿನ್ನು ಟ್ರಕ್​ಗೆ ಗುದ್ದಿ ಮಗನೊಂದಿಗೆ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಭಯಾನಕ ಘಟನೆ ಕೇರಳದ ತಿರುವನಂತಪುರದಲ್ಲಿ ನಡೆದಿದೆ. ಪ್ರಕಾಶ್ (48) ಹಾಗೂ ಅವರ ಮಗ  11 ವರ್ಷದ ಮಗ ಶಿವದೇವ್ ಮೃತ ದುರ್ದೈವಿಗಳು.

ಆತ್ಮಹತ್ಯೆ ಮಾಡಿಕೊಳ್ಳುವ  ಮುನ್ನ ಪ್ರಕಾಶ್  ಫೇಸ್‌ಬುಕ್ ಪೋಸ್ಟ್ ಹಾಕಿದ್ದು ಅದರಲ್ಲಿ ಪತ್ನಿ ಮತ್ತು ಆಕೆಯ ಸ್ನೇಹಿತರ ಫೋಟೋ ಶೇರ್​ ಮಾಡಿರುವ ಪ್ರಕಾಶ್​, ನಾನು ಸಾಯುತ್ತಿದ್ದೇನೆ. ಈ ವ್ಯಕ್ತಿಗಳೇ ನನ್ನ ಸಾವಿಗೆ ಕಾರಣರು. ಅವರಿಗೆ ಸೂಕ್ತ ಶಿಕ್ಷೆಯಾಗಬೇಕು ಎಂದಿದ್ದಾರೆ.

ಇನ್ನು ದಂಪತಿ ನಡುವೆ ಸಂಬಂಧ ಚೆನ್ನಾಗಿ ಇರಲಿಲ್ಲ ಎನ್ನಲಾಗಿದೆ. ಪತ್ನಿ ವಿದೇಶದಲ್ಲಿ ಕೆಲಸ ಮಾಡುತ್ತಿದ್ದು, ಆಕೆ ಊರಿಗೆ ಮರಳಲು ಒಪ್ಪುತ್ತಿರಲಿಲ್ಲ. ಬದಲಿಗೆ ತನ್ನ ಐಷಾರಾಮಿ ಜೀವನಕ್ಕೆ ಪತಿಯಿಂದ ಸಾಕಷ್ಟು ಬೇಡಿಕೆ ಇಡುತ್ತಿದ್ದಳು. ಊರಿಗೆ ಮಾತ್ರ ಬರುತ್ತಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಕಾರಿನಲ್ಲಿಯೂ ಡೆತ್​ನೋಟ್​ ಪತ್ತೆಯಾಗಿದ್ದು, ಅದರಲ್ಲಿ ನಾಲ್ಕು ಮಂದಿ ಹೆಸರು ಇದೆ. ನನ್ನ ಪತ್ನಿ ಮತ್ತು ಆಕೆಯ ಸ್ನೇಹಿತರು ನನಗೆ ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಹಿಂಸೆ ನೀಡುತ್ತಿದ್ದರು ಎಂದು ಡೆತ್​ನೋಟ್​ನಲ್ಲಿ ಬರೆಯಲಾಗಿದೆ. ಈ ಸ್ನೇಹಿತರು ಯಾರು? ಅವರು ಏನು ಹಿಂಸೆ ಕೊಡುತ್ತಿದ್ದರು ಎಂಬ ಬಗ್ಗೆ ತನಿಖೆ ಮಾಡುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

- Advertisement -

Latest News

error: Content is protected !!