Friday, June 5, 2026
Homeತಾಜಾ ಸುದ್ದಿಸುಳ್ಯ: ಓಮ್ನಿ- ಬೈಕ್ ಪರಸ್ಪರ ಡಿಕ್ಕಿ- ಅಪಾಯದಿಂದ ಪಾರು

ಸುಳ್ಯ: ಓಮ್ನಿ- ಬೈಕ್ ಪರಸ್ಪರ ಡಿಕ್ಕಿ- ಅಪಾಯದಿಂದ ಪಾರು

- Advertisement -
- Advertisement -

ಸುಳ್ಯ: ಓಮ್ನಿ ಹಾಗೂ ಬೈಕ್ ಪರಸ್ಪರ ಡಿಕ್ಕಿ ಹೊಡೆದು ಎರಡೂ ವಾಹನ ಜಖಂಗೊಂಡ ಘಟನೆ ಕಳಂಜ ಗ್ರಾಮದ ತಂಟೆಪ್ಪಾಡಿ ತಿರುವಿನಲ್ಲಿ ಸಂಭವಿಸಿದೆ.


ಕಳಂಜ ಗ್ರಾಮದ ಕಜೆಮೂಲೆ ಬಸ್ ತಂಗುದಾಣ ಬಳಿ ತಂಟೆಪ್ಪಾಡಿಗೆ ಕ್ರಾಸ್ ಆಗುತ್ತಿದ್ದ ಓಮ್ನಿ ಮತ್ತು ಬೈಕ್ ಪರಸ್ಪರ ಡಿಕ್ಕಿ ಹೊಡೆಯಿತು. ಪರಿಣಾಮ ಬೈಕ್ ಮತ್ತು ಓಮ್ನಿ ಜಖಂಗೊಂಡಿದೆ.

ಜಮಲ್ ಎಂಬವರು ಚಾಲಾಯಿಸುತಿದ್ದಓಮ್ನಿ ತಂಟೆಪ್ಪಾಡಿ ಕಡೆ ಕ್ರಾಸ್ ಆಗುತಿದ್ದ ಸಂದರ್ಭ ಎದುರಿನಿಂದ ಬಂದ ಅಂಕಿತ್ ಎಂಬವರ ಬೈಕ್‌ಗೆ ಡಿಕ್ಕಿಹೊಡೆಯಿತು.


ಅಂಕಿತ್‌ರವರಿಗೆ ಸಣ್ಣಪುಟ್ಟ ಗಾಯವಾಗಿದೆ. ಬೆಳ್ಳಾರೆ ಪೊಲೀಸರು ಸ್ಥಳಕ್ಕೆ ಬಂದಿದ್ದು ಬಳಿಕ ರಾಜಿಯಲ್ಲಿ ಪ್ರಕರಣ ಮುಗಿಸಲಾಯಿತು ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!