Thursday, June 4, 2026
Homeಅಪರಾಧಠಾಣೆಗೆ ನುಗ್ಗಿ ಪೊಲೀಸರಿಗೇ ಚಾಕು ಇರಿದ ಯುವಕ; ಐವರು ಪೋಲಿಸರ ಮೇಲೆ ಹಲ್ಲೆ

ಠಾಣೆಗೆ ನುಗ್ಗಿ ಪೊಲೀಸರಿಗೇ ಚಾಕು ಇರಿದ ಯುವಕ; ಐವರು ಪೋಲಿಸರ ಮೇಲೆ ಹಲ್ಲೆ

- Advertisement -
- Advertisement -

ದೆಹಲಿ: ಠಾಣೆಗೆ ನುಗ್ಗಿದ ಯುವಕನೊಬ್ಬ ಐವರು ಪೊಲೀಸರಿಗೆ ಹಾಗೂ ಗೃಹ ರಕ್ಷಕ ಸಿಬ್ಬಂದಿಗೆ ಚಾಕುವಿನಿಂದ ಇರಿದ ಘಟನೆ ಪೂರ್ವ ದೆಹಲಿಯ ಶಾಹದಾರಾದದಲ್ಲಿ ನಡೆದಿದೆ.


ಭರತ್ ಭಾಟಿ (28) ಚಾಕು ಇರಿದ ಆರೋಪಿ. ಈತ ಶಹದಾರದ ಸೈಬರ್ ಪೊಲೀಸ್ ಠಾಣೆಯ ಮೂರನೇ ಮಹಡಿಗೆ ನುಗ್ಗಿ ಸಿಬ್ಬಂದಿ ಮೇಲೆ ದಾಳಿ ಮಾಡಿದ್ದಾನೆ. ಹೆಡ್ ಕಾನ್‌ಸ್ಟೆಬಲ್ ದೀಪಕ್, ಕಾನ್‌ಸ್ಟೆಬಲ್‌ಗಳಾದ ಅಮಿತ್, ಮನೀಶ್, ನರೇಶ್ ಸುನೀಲ್ ಮತ್ತು ಹೋಂಗಾರ್ಡ್ ರವಿ ಮೇಲೆ ಹಲ್ಲೆ ಮಾಡಲಾಗಿದೆ.


ಘಟನೆ ನಡೆದಾಗ 8 ಮಹಿಳೆಯರು ಸೇರಿದಂತೆ 20 ಜನರು ಪೊಲೀಸ್ ಠಾಣೆಯೊಳಗೆ ಇದ್ದರು ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!