Friday, March 29, 2024
Homeಉದ್ಯಮಪುತ್ತೂರಿನಲ್ಲಿ 25, 26ರಂದು ಘಮಘಮಿಸಲಿದೆ ಹಲಸು ಮೇಳ

ಪುತ್ತೂರಿನಲ್ಲಿ 25, 26ರಂದು ಘಮಘಮಿಸಲಿದೆ ಹಲಸು ಮೇಳ

spot_img
- Advertisement -
- Advertisement -

ಪುತ್ತೂರು: ನವತೇಜ ಪುತ್ತೂರು ಹಾಗೂ ಜೆಸಿಐ ಪುತ್ತೂರಿನ ವತಿಯಿಂದ ಕಳೆದ ಹಲವು ವರ್ಷಗಳಿಂದ ಪುತ್ತೂರಿನ ಆಸುಪಾಸಿನ ಜನರ ಮನಗೆದ್ದಿರುವ ಹಲಸು ಮೇಳ ಈ ಬಾರಿ ಜೂ.25 ಮತ್ತು 26 ರಂದು ಪುತ್ತೂರು ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಶ್ರೀ ಸುಕೃತೀಂದ್ರ ಸಭಾ ಭವನದಲ್ಲಿ ಬೆಳಗ್ಗೆ 9 ರಿಂದ ರಾತ್ರಿ 7ರವರೆಗೆ ನಡೆಯಲಿದೆ.


ಈ ಬಾರಿಯ ಹಲಸಿನ ಮೇಳವು ವಿವಿಧ ಜಾತಿಯ ಹಲಸಿನ ಗಿಡಗಳ ಮಾರಾಟ, ಹಲಸಿನಕಾಯಿ ತುಂಡರಿಸುವ ಸಾಧನಗಳು, ಹಲಸಿನ ಹಣ್ಣಿನ ತಿನಸುಗಳ ಪ್ರದರ್ಶನ ಹಾಗೂ ಮಾರಾಟ ಮುಂತಾದ ವಿಶೇಷತೆಗಳಿಂದ ಕೂಡಿದೆ ಎಂದು ಪುತ್ತೂರಿನ ನವತೇಜ ಸಂಸ್ಥೆಯ ಕಾರ್ಯದರ್ಶಿ ಸುಹಾಸ್ ಮರಿಕೆ ಹೇಳಿದರು.


ಜೂ.23ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಹಲಸು ಮೇಳದ ವಿಶೇಷತೆಗಳ ಕುರಿತಾಗಿ ಮಾಹಿತಿ ನೀಡಿದರು.


ಜೂ.25ರಂದು ಪೂರ್ವಾಹ್ನ ೮.೩೦ಕ್ಕೆ ಪುತ್ತೂರು ಶಾಸಕ ಸಂಜೀವ ವಠಂದೂರು ಉಪಸ್ಥಿತಿಯಲ್ಲಿ ಈಶ್ವರಮಂಗಲದ ಕೃಷಿಕ, ಹಲಸು ಪ್ರೇಮಿ ಕತ್ರಿಬೈಲು ವೆಂಕಟೇಶ್ವರ ಶರ್ಮರು ಮೇಳಗಳ ಮಳಿಗೆಯನ್ನು ಉದ್ಘಾಟಿಸಲಿದ್ದಾರೆ. ಪೂ.10 ಗಂಟೆಗೆ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ಅಧ್ಯಕ್ಷತೆಯಲ್ಲಿ ಮೀಯಪದವಿನ ಕೃಷಿಕ ಡಾ.ಚಂದ್ರಶೇಖರ ಚೌಟರು ಮೇಳಕ್ಕೆ ಚಾಲನೆ ನೀಡಲಿದ್ದಾರೆ.


ಜೇಸಿಐ ಪ್ರಾದೇಶಿಕ ಅಧ್ಯಕ್ಷ ಜೇಸಿ ಸೆನೆಟ‌ ರೋಯನ್ ಉದಯ್ ಕ್ರಾಸ್ತಾ, ಪುತ್ತೂರು ಲಕ್ಷ್ಮೀವೆಂಕಟ್ರಮಣ ದೇವಸ್ಥಾನದ ಡಾ.ಗೋಪಿನಾಥ್ ಪೈ, ನವತೇಜ ಸಂಸ್ಥೆಯ ಅಧ್ಯಕ್ಷ ಅನಚಿತಪ್ರಸಾದ್ ನೈತ್ತಡ್ಕ, ಪುತ್ತೂರು ಜೆಸಿಐ ಅಧ್ಯಕ್ಷ ಶಶಿರಾಜ್ ರೈ ಕಾರ್ಯಕ್ರಮದಲ್ಲಿ ಉಪಸ್ಥಿತರಿಲಿದ್ದಾರೆ.

ಜೂ.26ರ ಪೂ.10 ಗಂಟೆಗೆ ಹಲಸಿನ ಮೌಲ್ಯವರ್ಧನೆಯ ಕುರಿತಾಗಿ ಮಾತುಕತೆ ನಡೆಯಲಿದ್ದು, ನವನೀತ ನರ್ಸರಿಯ ವೇಣುಗೋಪಾಲ್ ಶಿಬರ,ಬಿ.ಸಿ ರೋಡು ಹಲಸಿನ ಅಂಗಡಿಯ ಮೌನೀಶ್ ಮಲ್ಯ, ಕೇಪು-ಉಬರು ಹಲಸು ಸ್ನೇಹಿತರ ಕೂಟದ ಮುಳಿಯ ವೆಂಕಟಕೃಷ್ಣ ಶರ್ಮ ಹಾಗೂ ಪುರುಷರ ಕಟ್ಟೆಯ ನಿಧಿ ಫುಡ್ ಪ್ರಾಡಕ್ಟ್ ಇದರ ರಾಧಾಕೃಷ್ಣ ಇಟ್ಟಿಗುಂಡಿ ಭಾಗವಹಿಸಲಿದ್ದಾರೆ.


ಸಂಜೆ 4 ಗಂಟೆಗೆ ನವನೀತ ನರ್ಸರಿಯ ಸ್ಥಾಪಕ ಶಿಬರ ಜಯರಾಮ ಕೆದಿಲಾಯರ ಅಧ್ಯಕ್ಷತೆಯಲ್ಲಿ ಸಮಾರೋಪ ಕಾರ್ಯಕ್ರಮ ಸಂಪನ್ನಗೊಳ್ಳಲಿದ್ದು, ವಿಟ್ಲಪಿಂಗಾರ ಸಂಸ್ಥೆಯ ರಾಮ್ ಕಿಶೋರ್ ಮಂಚಿ ಸಮಾರೋಪ ಭಾಷಣ ಮಾಡಲಿದ್ದಾರೆ, ರೈತರಿಗಾಗಿ ಪಾರ್ಮರ್ಸ್ ಕೌಂಟರ್ ಸ್ಥಾಪಿಸಲಾಗಿದ್ದು, ಕೃಷಿಕರು ತಾವು ಬೆಳೆದ ವಿಶಿಷ್ಟವಾದ ತರಕಾರಿಗಳ ಮಾರಾಟ ಹಾಗೂ ಪ್ರದರ್ಶನಕ್ಕೆ ಅವಕಾಶವಿದೆ.


ಸುಮಾರು ೩೨ ಮಳಿಗೆಗಳು ಮೇಳದ ಅಂದವನ್ನು ಹೆಚ್ಚಿಸಲಿದ್ದು ಹತ್ತು ಸಾವಿರಕ್ಕೂ ಅಧಿಕ ಮಂದಿ ಕೃಷಿ ಹಾಗೂ ಹಲಸು ಪ್ರೇಮಿಗಳು ಮೇಳದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದು ಹಲಸು ಮೇಳವನ್ನು ಯಶಸ್ವಿಗೊಳಿಸಬೇಕು ಎಂದರು.


ಪುತ್ತೂರು ಜೆಸಿಐ ಅಧ್ಯಕ್ಷ ಶಶಿರಾಜ್ ರೈ ಮಾತನಾಡಿ ಈ ಬಾರಿಯ ಹಲಸು ಮೇಳದಲ್ಲಿ ಜೆಸಿಐ ವತಿಯಿಂದ ಹಲಸಿನ ಕುರಿತಾಗಿ ಹಲವು ಸ್ಪರ್ದೆಗಳ ಆಯೋಜನೆ ಮಾಡಲಾಗಿದೆ. ಜೂ.25ರಂದು ಸಚಿಜೆ ಅತ್ಯಂತ ಎಚ್ಚು ಭಾರದ ಹಲಸು ಎತ್ತುವ ಸ್ಪರ್ಧೆ, ವೇಗವಾಗಿ ಹಲಸು ಬಿಡಿಸುವ ಸ್ಪರ್ಧೆ, ವೇಗವಾಗಿ ಹಲಸು ತಿನ್ನುವ ಸ್ಪರ್ಧೆಗಳು ನಡೆಯಲಿದೆ. 26 ರಂದು ಬೆಳಗ್ಗೆ ಮಕ್ಕಳಿಗಾಗಿ ಚಿತ್ರ ಬಿಡಿಸುವ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಹೀಗೆ ವಿವಿಧ ಸ್ಪರ್ಧೆಗಳು ನಡೆಯಲಿದೆ ಎಂದು ಹೇಳಿದರು.


ಹಲಸಿನಲ್ಲಿ ನಾನಾ ವೈವಿಧ್ಯತೆಗಳನ್ನು ನಾವು ಕಾಣಬಹುದು. ಅಂತಹ ವೈವಿಧ್ಯತೆಯಲ್ಲಿ ಒಂದಾದ ಕೆಂಪು ಹಲಸು ತಿಪಟೂರಿನಲ್ಲಿ ದೊರೆಯುತ್ತದೆ. ಆದರೆ ಈ ಬಾರಿ ಕೆಂಪು ಹಲಸನ್ನು ಪುತ್ತೂರಿನ ಹಲಸು ಮೇಳದಲ್ಲಿ ಕಾಣಲು ಸಾಧ್ಯ ತಿಪಟೂರಿನ ಪ್ರಸಿದ್ದ ಕೆಂಪು ಹಲಸು ಗ್ರಾಹಕರ ಹೊಟ್ಟೆ ಹಾಗೂ ಮನ ತಣಿಸಲು ಸಾಕಷ್ಟು ಪ್ರಮಾಣದಲ್ಲಿ ದೊರೆಯಲಿದೆ ಎಂದು ಪುತ್ತೂರು ನವತೇಜ ಸಂಘಟನೆಯ ಕಾರ್ಯದರ್ಶಿ ಸುಹಾಸ್ ಮರಿಕೆ ಹೇಳಿದ್ದಾರೆ.

- Advertisement -
spot_img

Latest News

error: Content is protected !!