Saturday, June 13, 2026
Homeಕೊಡಗುಕಾರ್ ಹಾಗೂ ಬೈಕಿನ ನಡುವೆ ಭೀಕರ ರಸ್ತೆ ಅಪಘಾತ

ಕಾರ್ ಹಾಗೂ ಬೈಕಿನ ನಡುವೆ ಭೀಕರ ರಸ್ತೆ ಅಪಘಾತ

- Advertisement -
- Advertisement -

ಕೊಡಗು: ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಗುಡ್ಡೆ ಹೊಸೂರು ಬಳಿ ಕಾರ್ ಹಾಗೂ ಬೈಕಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ದುರ್ಮರಣವನ್ನಪ್ಪಿದ್ದಾರೆ.

ಬೈಕ್ ನಲ್ಲಿ ಪ್ರಯಾಣ ನಡೆಸುತ್ತಿದ್ದ ಬೈಕ್ ಸವಾರರಾದ ಸಚಿನ್ (23) ಹಾಗೂ ಪೊನ್ನಪ್ಪ (28) ಮೃತ ದುರ್ದೈವಿಗಳು. ಕಾರು ಹಾಗೂ ಬೈಕ್ ನ ಬಹುತೇಕ ಭಾಗಗಳು ನಜ್ಜುಗುಜ್ಜಾಗಿದ್ದು, ಈ ಅಪಘಾತದಲ್ಲಿ ಇಬ್ಬರು ದಾರುಣವಾಗಿ ಅಂತ್ಯ ಕಂಡಿದ್ದಾರೆ.

ಮೃತರನ್ನು ಕಳೆದುಕೊಂಡಿರುವ ಮನೆಯವರು ಹಾಗೂ ಮೃತ ಯುವಕರ ಸ್ನೇಹಿತರು ತೀವ್ರ ಬೇಸರವನ್ನು ವ್ಯಕ್ತಪಡಿಸಿದ್ದು, ಘಟನಾ ಸಂಬಂಧ ಕುಶಾಲನಗರ ಸಂಚಾರಿ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಈ ಸಂಬಂಧ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!