Sunday, June 7, 2026
Homeಕರಾವಳಿಕರಾವಳಿಗೂ ತಟ್ಟಿದ ಸಾರಿಗೆ ನೌಕರರ ಮುಷ್ಕರದ ಬಿಸಿ-ಧರ್ಮಸ್ಥಳ, ಮಂಗಳೂರಿನಲ್ಲೂ ಬಸ್ ಸಂಚಾರ ಸ್ಥಗಿತ!..

ಕರಾವಳಿಗೂ ತಟ್ಟಿದ ಸಾರಿಗೆ ನೌಕರರ ಮುಷ್ಕರದ ಬಿಸಿ-ಧರ್ಮಸ್ಥಳ, ಮಂಗಳೂರಿನಲ್ಲೂ ಬಸ್ ಸಂಚಾರ ಸ್ಥಗಿತ!..

- Advertisement -
- Advertisement -

ಧರ್ಮಸ್ಥಳ :ನಿನ್ನೆರಾಜ್ಯದ್ಯಂತ ಸಾರಿಗೆ ನೌಕರರ ಮುಷ್ಕರ ಆರಂಭವಾಗಿತ್ತು. ಇದರ ‌ ಪರಿಣಾಮ ಇಂದು ಕರಾವಳಿಯಲ್ಲೂ ಬಸ್ ಸಂಚಾರ ಸ್ಥಗಿತಗೊಂಡಿದೆ.ಇಲ್ಲಿನ ಎಲ್ಲಾ ನಿಲ್ದಾಣದಲ್ಲಿ ಬೆಳಗ್ಗಿನಿಂದಲೇ ಪ್ರಯಾಣಿಕರು ಬಸ್ ದೊರಕದೆ ತೊಂದರೆ ಎದುರಿಸುತ್ತಿರುವುದು ಕಂಡು ಬಂತು.

ಶುಕ್ರವಾರ ಸಹಜ ವಾಗಿಯೇ ಕೆ.ಎಸ್.ಆರ್.ಟಿ.ಸಿ ಬಸ್ ಓಡಾಟ ನಡೆದಿದೆ. ಆದರೆ ಇಂದು ಧರ್ಮಸ್ಥಳ, ಮಂಗಳೂರು, ಪುತ್ತೂರಿನಲ್ಲೂ ಬಸ್ ಸಂಚಾರ ಸ್ಥಗಿತವಾಗಿದೆ.ಲಕ್ಷದೀಪದ ಅವಧಿಯಾಗಿರುವುದರಿಂದ ಧರ್ಮಸ್ಥಳದಲ್ಲಿ ಯಾತ್ರಾರ್ಥಿಗಳು ಬಸ್ ದೊರಕದೆ ತೊಂದರೆ ಎದುರಿಸುತ್ತಿರುವುದು ಕಂಡು ಬಂತು.

ಬಸ್‌ನಿಲ್ದಾಣಕ್ಕೆ ಬರಬೇಕಿದ್ದ ಬಸ್ ನೌಕರರ ಧಿಡೀರ್ ಮುಷ್ಕರದ ಪರಿಣಾಮ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಉಳಿದಿದೆ. ಯಾವುದೇ ಬಸ್ ಗಳು ಬಾರದೆ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ.ಮುಷ್ಕರಕ್ಕೆ ಹಿನ್ನೆಲೆಯಲ್ಲಿ ಇತರ ಪ್ರದೇಶದಿಂದ ಕರಾವಳಿಗೆ ಕೆ.ಎಸ್.ಆರ್.ಟಿ.ಸಿ ಸಂಚಾರ ಇಲ್ಲದೆ ಬಹುತೇಕ ಮಂದಿ ಪ್ರಯಾಣಿಕರು ರೈಲು ಮೂಲಕ ಕರಾವಳಿಗೆ ಪ್ರಯಾಣ ಬೆಳೆಸುತ್ತಿದ್ದಾರೆ.

- Advertisement -

Latest News

error: Content is protected !!