Sunday, June 7, 2026
Homeತಾಜಾ ಸುದ್ದಿಚಲಿಸುವ ಕಾರ್ ಗೆ ನಾಯಿಯನ್ನು ಕಟ್ಟಿ ಎಳೆದೊಯ್ದ-ವಿಕೃತ ಮನಸ್ಥಿತಿಯ ವ್ಯಕ್ತಿ ಅಂದರ್!..

ಚಲಿಸುವ ಕಾರ್ ಗೆ ನಾಯಿಯನ್ನು ಕಟ್ಟಿ ಎಳೆದೊಯ್ದ-ವಿಕೃತ ಮನಸ್ಥಿತಿಯ ವ್ಯಕ್ತಿ ಅಂದರ್!..

- Advertisement -
- Advertisement -

ತಿರುವನಂತಪುರಂ: ಇಲ್ಲಿನ ಎರ್ನಾಕುಲಂನಲ್ಲಿ ವಿಕೃತ ಮನಸ್ಥಿತಿಯ ವ್ಯಕ್ತಿಯೊಬ್ಬ ಚಲಿಸುವ ಕಾರ್ ಗೆ ನಾಯಿಯನ್ನು ಕಟ್ಟಿ ಎಳೆದೊಯ್ದ ಘಟನೆ ವರದಿಯಾಗಿದೆ, ಸಧ್ಯ ಈತನನ್ನು ಬಂಧಿಸಲಾಗಿದೆ.ಯೂಸುಫ್ ಬಂಧಿತ ವ್ಯಕ್ತಿ. ತನ್ನ ಮನೆಯ ಬಳಿ ಕಾಟ ಕೊಟ್ಟಿತು ಎಂಬ ಕಾರಣಕ್ಕೆ ಯೂಸುಫ್ ತಾನೇ ಕಾರ್ ಚಾಲನೆ ಮಾಡುತ್ತಾ ಕಾರಿನ ಹಿಂಭಾಗಕ್ಕೆ ನಾಯಿಯನ್ನು ಕಟ್ಟಿಕೊಂಡು ರಸ್ತೆಯಲ್ಲೇ ಎಳೆದುಕೊಂಡು ಹೋಗಿದ್ದಾನೆ.

ಈ ಕೃತ್ಯವನ್ನು ಗಮನಿಸಿದವರೊಬ್ಬರು ವಿಡಿಯೋ ಮಾಡಿ ಮಾಹಿತಿ ನೀಡಿದ್ದು, ಚಂಗಮಂಡ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ನಾಯಿಗೆ ಹಗ್ಗ ಕಟ್ಟಿ ಎಳೆದುಕೊಂಡು ಹೋಗಿದ್ದಾನೆ. ಪೋಲೀಸರ ಅತಿಥಿಯಾಗಿರುವ ಈತನ ನಡೆಗೆ ಸಾಮಾಜಿಕ ಜಾಲ ತಾಣದಲ್ಲಿ ಖಂಡನೆ ವ್ಯಕ್ತ ವಾಗಿದೆ.

- Advertisement -

Latest News

error: Content is protected !!