Monday, June 8, 2026
Homeತಾಜಾ ಸುದ್ದಿಸಾರಿಗೆ ನೌಕರರ ವಿರುದ್ಧ ಎಸ್ಮಾ ಜಾರಿಗೆ ಮುಂದಾದ ಸರ್ಕಾರ - ಏನಿದು ಎಸ್ಮಾ ವಿಶೇಷ ?

ಸಾರಿಗೆ ನೌಕರರ ವಿರುದ್ಧ ಎಸ್ಮಾ ಜಾರಿಗೆ ಮುಂದಾದ ಸರ್ಕಾರ – ಏನಿದು ಎಸ್ಮಾ ವಿಶೇಷ ?

- Advertisement -
- Advertisement -

ಬೆಂಗಳೂರು: ಮುಷ್ಕರ ನಡೆಸುತ್ತಿರುವ ಸಾರಿಗೆ ನೌಕರರಿಗೆ ರಾಜ್ಯ ಸರ್ಕಾರ‌ ಶಾಕ್‌ ನೀಡಲು ಮುಂದಾಗಿದೆ. ಎಸ್ಮಾ ಜಾರಿಗೆ ತರಲು ಯೋಜನೆ ರೂಪಿಸಲಾಗುತ್ತಿದೆ ಎಂದು ಮಾಹಿತಿ ಹೊರಬಿದ್ದಿದೆ.ಒಂದು ವೇಳೆ ನಾಳೆಯೊಳಗೆ ಕೆಲಸಕ್ಕೆ ಹಾಜರಾಗದೇ ಹೋದ್ರೆ ಎಸ್ಮಾ ಜಾರಿಗೆ ತರುವ ಸಂಭವವಿದೆ.

ಎಸ್ಮಾ ಜಾರಿಗೆ ಬಂದರೆ ‘ಕಡ್ಡಾಯ ಕೆಲಸ’ ವಹಿಸಲಾಗುತ್ತದೆ. ಈ ಅಗತ್ಯ ಸೇವೆ ನಿರ್ವಹಣೆ ಕಾಯಿದೆ (Essential Services Maintenance Act) (ESMA) ಎನ್ನುವುದು ಭಾರತದ ಸಂಸತ್ತಿನ ಒಂದು ಕಾರ್ಯವಾಗಿದೆ. ಸೇವೆಗಳ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಇದು ಕಾರ್ಯ ನಿರ್ವಹಿಸುತ್ತದೆ.

ಎಸ್ಮಾ ಕಾಯ್ದೆ ಉಲ್ಲಂಘನೆ ಮಾಡಿದರೆ ವಾರಂಟ್ ಇಲ್ಲದೇ ಬಂಧನ, ೬ ತಿಂಗಳ ಜೈಲು ಶಿಕ್ಷೆ ನೀಡಬಹುದು. ಸರ್ಕಾರಿ ನೌಕರರು ಸಾಮೂಹಿಕ ಪ್ರತಿಭಟನೆಗೆ ಮುಂದಾ್ದರೆ ಪರಿಸ್ಥಿತಿಯನ್ನು ಹಿಡಿತಕ್ಕೆ ತರಲು ಸರ್ಕಾರ ಎಸ್ಮಾ ಜಾರಿ ಮಾಡಲು ಮುಂದಾಗುತ್ತದೆ. ಎಸ್ಮಾ ಜಾರಿಯಾದ ಮೇಲೂ ಉದ್ಯೋಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡರೆ ಆತನ ವೇತನ, ಭತ್ಯೆ, ಬಡ್ತಿ ಮತ್ತು ಇತರ ಸವಲತ್ತುಗಳ ಮೇಲೆ ಸರ್ಕಾರ ಹಿಡಿತ ಸಾಧಿಸಬಹುದು.

- Advertisement -

Latest News

error: Content is protected !!