Monday, June 8, 2026
Homeಪ್ರಮುಖ-ಸುದ್ದಿಬೆಂಗಳೂರಿನಲ್ಲಿ ಇಂದು ಪತ್ತೆಯಾದ 503 ಪ್ರಕರಣಗಳಿಗೆ ಸೋಂಕಿನ ಮೂಲವೇ ಗೊತ್ತಿಲ್ಲ

ಬೆಂಗಳೂರಿನಲ್ಲಿ ಇಂದು ಪತ್ತೆಯಾದ 503 ಪ್ರಕರಣಗಳಿಗೆ ಸೋಂಕಿನ ಮೂಲವೇ ಗೊತ್ತಿಲ್ಲ

- Advertisement -
- Advertisement -

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಆರ್ಭಟ ದಿನ ದಿನದಂದ ಹೆಚ್ಚಾಗುತ್ತಿದೆ. ಕೇಸುಗಳ ಸಂಖ್ಯೆ ಏರುತ್ತಿರೋದನ್ನು ನೋಡಿದ್ರೆ ಇದು ಎಲ್ಲಿಗೆ ಹೋಗಿ ಮುಟ್ಟುತ್ತೆ ಅನ್ನೋ ಆತಂಕ ಶುರುವಾಗುತ್ತೆ. ಹೀಗಿರುವಾಗಲೇ ಇವತ್ತು ಭಯನಾಕ ಸತ್ಯವೊಂದನ್ನು ಬಿಚ್ಚಿಟ್ಟಿದೆ ಆರೋಗ್ಯ ಇಲಾಖೆ.

ಯೆಸ್.. ಬೆಂಗಳೂರಿನ ಗಲ್ಲಿ ಗಲ್ಲಿಗಳೂ ಕಾಲಿಟ್ಟಿದೆ ಕೊರೊನಾ.  ಇದಕ್ಕಿಂತಲೂ ಆತಂಕ ಏನಪ್ಪಾ ಅಂದ್ರೆ ಇವತ್ತು ಪತ್ತೆಯಾದ 503 ಕೊರೊನಾ ಪ್ರಕರಣಗಳಿಗೆ ಸೋಂಕಿನ ಮೂಲವೇ ಗೊತ್ತಿಲ್ಲ. ರಾಜಧಾನಿಯಲ್ಲಿ ಕೊರೊನಾ ಸಮುದಾಯಕ್ಕೆ ಹರಡಿದೆ ಎನ್ನುವುದಕ್ಕೆ ಇದು ಸ್ಪಷ್ಟ ಸಾಕ್ಷಿ ಹೇಳುತ್ತಿದೆ. ಇವತ್ತು ಪತ್ತೆಯಾದ 503 ಪ್ರಕರಗಳಿಗೂ ಮೂಲಗಳೇ ಗೊತ್ತಾಗುತ್ತಿಲ್ಲ, ಇನ್ನು ಅದೆಷ್ಟೋ ಮಂದಿಯ ವರದಿ ಬರಬೇಕಾಗಿದೆ. ಎಲ್ಲವನ್ನೂ ಗಮನಿಸುತ್ತಾ ಹೋದ್ರೆ ಆರೋಗ್ಯ ಇಲಾಖೆ ಸೋಂಕಿನ ಮೂಲವನ್ನು ಪತ್ತೆ ಹಚ್ಚೋದನ್ನೇ ಕೈ ಬಿಟ್ಟಿದ್ಯಾ ಅನ್ನೋ ಅನುಮಾನ ಶುರುವಾಗುತ್ತಿದೆ. ಜನ ತಾವಾಗಿಯೇ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸದೇ ಇರೋವರೆಗೂ ಈ  ಸಮಸ್ಯೆಗೆ ಪರಿಹಾರವಂತೂ ಇಲ್ವೇ ಇಲ್ಲ.

- Advertisement -

Latest News

error: Content is protected !!