Sunday, June 7, 2026
Homeಕರಾವಳಿಶಿಶಿಲ: 25 ಲಕ್ಷದ ನೂತನ ಬಸ್ ನಿಲ್ದಾಣದಲ್ಲಿ ಗೋಲ್ ಮಾಲ್, ಪಂಚಾಯತ್ ಅಧ್ಯಕ್ಷರಿಗೆ ನಾಗರಿಕರಿಂದ ಛೀಮಾರಿ..!

ಶಿಶಿಲ: 25 ಲಕ್ಷದ ನೂತನ ಬಸ್ ನಿಲ್ದಾಣದಲ್ಲಿ ಗೋಲ್ ಮಾಲ್, ಪಂಚಾಯತ್ ಅಧ್ಯಕ್ಷರಿಗೆ ನಾಗರಿಕರಿಂದ ಛೀಮಾರಿ..!

- Advertisement -
- Advertisement -

ಶಿಶಿಲ: ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮ ಪಂಚಾಯತ್ ನಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ಮತ್ತು ಕಳ್ಳದಾರಿಯ ಮೂಲಕ ಸಂಕೀರ್ಣ ಉದ್ಘಾಟನೆ ನಡೆಸಿರುವ ಬಗ್ಗೆ ಗ್ರಾಮಸ್ಥರು ಗರಂ ಆಗಿರುವ ಘಟನೆ ಇಂದು ನಡೆದಿದೆ.

25 ಲಕ್ಷ ವೆಚ್ಚದಲ್ಲಿ ಶಿಶಿಲ ಗ್ರಾಮ ಪಂಚಾಯತ್ ವತಿಯಿಂದ ಉಮ್ಮಂತಿಮಾರ್ ಎಂಬಲ್ಲಿ ವಾಣಿಜ್ಯ ಸಂಕೀರ್ಣ ಮತ್ತು ನೂತನ ಬಸ್ ನಿಲ್ದಾಣ ನಿರ್ಮಾಣ ಮಾಡಿದ್ದು, ಆದರೆ ಉದ್ಘಾಟನೆಗೆ ಮುಂಚೆಯೇ ನಿರ್ಮಾಣವಾಗಿರುವ ಕಟ್ಟಡ ಸೋರುತ್ತಿದೆ. ಹಾಗೆಯೆ ಕಟ್ಟಡದೊಂದಿಗೆ ಅವೈಜ್ಞಾನಿಕವಾಗಿ ನಿರ್ಮಿಸಿರುವ ಶೌಚಾಲಯವನ್ನು ಬಳಸಲು ಯೋಗ್ಯವಾಗಿಲ್ಲ ಎನ್ನುವುದು ಸಾರ್ವಜನಿಕರ ವಾದ.

ಇಂದು ಯಾವುದೇ ರೀತಿಯ ಆಮಂತ್ರಣ ಅಥವಾ ಮುನ್ಸೂಚನೆ ನೀಡದೆ, ಪಂಚಾಯತ್ ನ ಆಡಳಿತ ವರ್ಗವಷ್ಟೇ ಇಂದು ಕಳ್ಳರ ಹಾಗೆ ಕಟ್ಟಡಗಳ ಉದ್ಘಾಟನೆ ನೆರವೇರಿಸಿದೆ. ಇದನ್ನು ಪ್ರಶ್ನಿಸಲು ಬಂದ ನಾಗರಿಕರಿಗೆ ಅಧ್ಯಕ್ಷೆ ಮತ್ತು ಪಂಚಾಯತಿ ಸದಸ್ಯರು ಅವ್ಯಾಚಕ ಶಬ್ದಗಳಿಂದ ನಿಂದಿಸಿ ಕಾಲ್ಕಿತ್ತ ಘಟನೆ ಕೂಡ ನಡೆದಿದೆ.

- Advertisement -

Latest News

error: Content is protected !!