Monday, June 29, 2026
Homeತಾಜಾ ಸುದ್ದಿಅಯ್ಯೋ! ತುಮಕೂರಿನಲ್ಲಿ 40 ಕುರಿಗಳಿಗೂ ಕೊರೊನಾ ಟೆಸ್ಟ್

ಅಯ್ಯೋ! ತುಮಕೂರಿನಲ್ಲಿ 40 ಕುರಿಗಳಿಗೂ ಕೊರೊನಾ ಟೆಸ್ಟ್

- Advertisement -
- Advertisement -

ತುಮಕೂರು : ಖಂಡಿತವಾಗಿಯೂ ಈ ಸ್ಟೋರಿ  ಓದಿದ್ರೆ ಎಂತಹವರಿಗಾದ್ರೂ ಅಯ್ಯೋ! ಎಂಥ ಕಾಲ ಬಂತಪ್ಪಾ ಅಂಥಾ ಅನ್ನಿಸದೇ ಇರೋದಿಲ್ಲ. ಕೊರೊನಾ ಮಹಾಮಾರಿ ಯಾವ ಜಗತ್ತಿಗೆ ಕಾಲಿಟ್ಟಿತೋ ಆವತ್ತೇ ಎಲ್ಲರ ನೆಮ್ಮದಿ ದೂರವಾಯ್ತು. ಪ್ರತಿದಿನ ದುಪ್ಪಟ್ಟಾಗುತ್ತಾ ಹೋಗುತ್ತಿರುವ ಕೊರೊನಾ ಕೇಸ್ ಗಳನ್ನು ನೋಡಿದ್ರೆ ಎದೆ ಝಲ್ ಅನ್ನುತ್ತೆ. ಹೀಗಿರುವಾಗಲೇ ವಿಚಿತ್ರ ಹಾಗೂ ಇಡೀ ಕರ್ನಾಟಕದ ಜನ ಬೆಚ್ಚಿ ಬೀಳುವಂತಹ ಘಟನೆಯೊಂದು ನಡೆದಿದೆ. ತುಮಕೂರಿನಲ್ಲಿ ಕುರಿಗಾಹಿಯೊಬ್ಬನಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು ಇದೀಗ ಆತಂಕಕ್ಕೆ ಕಾರಣವಾಗಿದೆ.

ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ  ತಾಲೂಕಿನ ಗೋಡೇಕೆರೆ ಗ್ರಾಮದಲ್ಲಿ  ಕುರಿಗಾಹಿಗೆ ಕೊರೊನಾ ದೃಢಪಟ್ಟಿದೆ. ಹಾಗಾಗಿ ಆತ ಕಾಯುತ್ತಿದ್ದ 40 ಕುರಿಗಳ ಸ್ಯಾಂಪಲ್ ಪರೀಕ್ಷೆ ಮಾಡಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ. ಕುರಿಗಾಹಿಗೆ ಕೊರೊನಾ ಕಾಣಿಸಿಕೊಂಡಿರೋದರಿಂದ ಕುರಿಗಳು ಕೊರೊನಾ ಬರುವ ಸಾಧ್ಯತೆ ಇರೋದರಿಂದ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಒಂದು ವೇಳೆ ಕುರಿಗಳಿಗೆ ಕೊರೊನಾ ಪಾಸಿಟಿವ್ ಬಂದ್ರೆ ನಿಜಕ್ಕೂ ಇಡೀ ರಾಜ್ಯದ ಜನರೇ ಬೆಚ್ಚಿ ಬೀಳೋದು ಗ್ಯಾರಂಟಿ. ಕುರಿಗಳ ಮಾಂಸ ಬೇರೆ ಬೇರೆ ಕಡೆ ರವಾನೆಯೋದರಿಂದ ಇದು ನಿಜಕ್ಕೂ ಎಲ್ಲರ ಭಯವಡುವಂತಹ ಘಟನೆಯಾಗಿದೆ.

- Advertisement -

Latest News

error: Content is protected !!