Monday, June 29, 2026
Homeತಾಜಾ ಸುದ್ದಿ3ನೇ ಮದುವೆಯಾದ ನಟಿಗೆ ಮೂರನೇ ದಿನಕ್ಕೆ ಕಾದಿತ್ತು ಬಿಗ್ ಶಾಕ್!..

3ನೇ ಮದುವೆಯಾದ ನಟಿಗೆ ಮೂರನೇ ದಿನಕ್ಕೆ ಕಾದಿತ್ತು ಬಿಗ್ ಶಾಕ್!..

- Advertisement -
- Advertisement -

ಚೆನ್ನೈ:  ಕೊರೊನಾ ಲಾಕ್‍ಡೌನ್ ನಡುವೆಯೂ ಅನೇಕ ನಟ-ನಟಿಯರು ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ತಮಿಳಿನ ನಟಿಯೊಬ್ಬರು ಸರಳವಾಗಿ ಮೂರನೇ ಮದುವೆಯಾಗಿದ್ದಾರೆ.

ನಟಿ ವನಿತಾ ವಿಜಯಕುಮಾರ್ ವಿಎಫ್‍ಎಕ್ಸ್ ತಂತ್ರಜ್ಞ ಪೀಟರ್ ಪೌಲ್ ಜೊತೆ ಮೂರನೇ ಮದುವೆಯಾಗಿದ್ದಾರೆ. ಜೂನ್ 27ರಂದು ಕ್ರಿಶ್ಚಿಯನ್ ಸಂಪ್ರದಾಯದಂತೆ ಇಬ್ಬರು ವಿವಾಹವಾಗಿದ್ದಾರೆ.

ಆದರೆ ಮದುವೆಯಾದ ಮೂರನೇ ದಿನಕ್ಕೆ ನಟಿಗೆ ಶಾಕ್ ಎದುರಾಗಿದೆ. ಹೌದು ಪೀಟರ್ ಪೌಲ್ ಅವರ ಪತ್ನಿ ಎಲಿಜಬೆತ್ ಅವರು ನನಗೆ ವಿಚ್ಛೇದನ ನೀಡದೆ ಮತ್ತೊಂದು ಮದುವೆಯಾಗಿದ್ದಾರೆ ಎಂದು ಪೀಟರ್ ವಿರುದ್ಧ ದೂರು ದಾಖಲಿಸಿದ್ದಾರೆ.

ಮೊದಲ ಪತ್ನಿಗೆ ವಿಚ್ಛೇದನ ನೀಡದೆ ಇನ್ನೊಂದು ಮದುವೆಯಾಗಿರುವ ಪೀಟರ್ ಪೌಲ್ ಗೆ ಇದೀಗ ಸಂಕಷ್ಟ ಎದುರಾಗಿದೆ.

ವನಿತಾ ವಿಜಯಕುಮಾರ್ ಅವರು ತಮಿಳು ನಟ ವಿಜಯ್ ಕುಮಾರ್ ಅವರ ಹಿರಿಯ ಮಗಳು. ತಮ್ಮ 20ನೇ ವಯಸ್ಸಿನಲ್ಲಿ ನಟ ಆಕಾಶ್ ಎಂಬುವರನ್ನು ವನಿತಾ ಮದುವೆಯಾಗಿದ್ದರು. 5 ವರ್ಷಗಳ ಸಂಸಾರ ನಡೆಸಿದ್ದ ನಂತರ ವನಿತಾ ಆತನಿಂದ ವಿಚ್ಛೇದನ ಪಡೆದಿದ್ದರು. ಬಳಿಕ 2007ರಲ್ಲಿ ಉದ್ಯಮಿ ರಾಜನ್ ಆನಂದ್ ಅವರನ್ನು ಮದುವೆಯಾಗಿದ್ದರು. ಆತನಿಗೂ ನಟಿ ವಿಚ್ಛೇದನ ನೀಡಿದ್ದರು.

ಪೀಟರ್ ಭೇಟಿ ಮಾಡಿದಾಗ ಪ್ರೀತಿಯಲ್ಲಿ ಬಿದ್ದೆ. ಮದುವೆಯಲ್ಲಿ ನನ್ನ ಕೈ ನೀಡುವಂತೆ ಪೀಟರ್ ಕೇಳಿದರು. ಆಗ ನಾನು ಏನು ಉತ್ತರ ಕೊಡದೆ ಮೂಕವಿಸ್ಮಿತಳಾದೆ. ಈ ವೇಳೆ ನನ್ನ ಮಕ್ಕಳು ಇದಕ್ಕೆ ಒಪ್ಪಬೇಕು ಎಂದು ಅವರಿಗೆ ಹೇಳಿದೆ. ನಂತರ ನನ್ನ ಮಕ್ಕಳೆದರು ಪೀಟರ್ ಬಗ್ಗೆ ಹೇಳಿದಾಗ ಅವರು ಸಂತಸದಿಂದ ಒಪ್ಪಿಕೊಂಡರು. ನನ್ನ ಪಾಲಿಗೆ ಸಂಭವಿಸುತ್ತಿರುವ ಅತ್ಯುತ್ತಮ ಗಳಿಗೆ ಎಂದು ಮಕ್ಕಳು ಹೇಳಿದಾಗ ನನ್ನ ಕಣ್ಣಲ್ಲಿ ನೀರು ಬಂತು ಎಂದು ವನಿತಾ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

- Advertisement -

Latest News

error: Content is protected !!