Tuesday, May 7, 2024
Homeಚಿಕ್ಕಮಗಳೂರುಅಪ್ಪನ ಸಾವಿನ ನೋವಲ್ಲೂ ಪರೀಕ್ಷೆ ಬರೆದ ಮಗ : ಪರೀಕ್ಷೆ ಮುಗಿಸಿ ಅಂತ್ಯಕ್ರಿಯೆಯಲ್ಲಿ ಭಾಗಿ

ಅಪ್ಪನ ಸಾವಿನ ನೋವಲ್ಲೂ ಪರೀಕ್ಷೆ ಬರೆದ ಮಗ : ಪರೀಕ್ಷೆ ಮುಗಿಸಿ ಅಂತ್ಯಕ್ರಿಯೆಯಲ್ಲಿ ಭಾಗಿ

spot_img
- Advertisement -
- Advertisement -

ಚಿಕ್ಕಮಗಳೂರು: ಅಪ್ಪನ ಸಾವಿನ ನೋವಲ್ಲೂ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿ ಪರೀಕ್ಷೆಗೆ ಹಾಜರಾಗಿರುವ ಕರುಣಾಜನಕ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಗೆದ್ಲೆಹಳ್ಳಿ ಗ್ರಾಮದಲ್ಲಿ ನಡೆದಿದೆ.

ಲಿಖಿತ್ ಅಪ್ಪನ ಸಾವಿನ ನೋವಲ್ಲೂ ಪರೀಕ್ಷೆ ಬರೆದ 10ನೇ ತರಗತಿ ವಿದ್ಯಾರ್ಥಿ. ಕಡೂರು ತಾಲೂಕಿನ ಗೆದ್ಲೆಹಳ್ಳಿ ಗ್ರಾಮದ ಲಿಖಿತ ಕಡೂರು ಪಟ್ಟಣದ ಬಿ.ಜಿ.ಎಸ್. ಪ್ರೌಢ ಶಾಲೆಯಲ್ಲಿ ಓದುತ್ತಿದ್ದ. ಲಿಖಿತ್ ತಂದೆ 41 ವರ್ಷದ ಸಂತೋಷ್‌ ಗೆ ಅನಾರೋಗ್ಯದ ಹಿನ್ನೆಲೆ ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ರು. ಆದರೆ, ಸಂತೋಷ್ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾರೆ. ಶುಕ್ರವಾರ ಮೃತ ಸಂತೋಷ್ ಅಂತ್ಯಸಂಸ್ಕಾರ. ಆದರೆ, ಅದೇ ದಿನ ಲಿಖಿತ್ ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯಬೇಕಿತ್ತು. ಶುಕ್ರವಾರ ಅಪ್ಪನ ಅಂತ್ಯಕ್ರಿಯೆಗೇ ಸಿದ್ಧತೆ ನಡೆಯುತ್ತಿರುವಾಗಲೇ ಆ ನೋವಿನಲ್ಲೂ ಲಿಖಿತ್  ಕಡೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದಾನೆ.

ಪರೀಕ್ಷೆ ಮುಗಿಸಿಕೊಂಡು ಬಂದು ಅಪ್ಪನ ಅಂತ್ಯಕ್ರಿಯೆಯಲ್ಲಿ ಲಿಖಿತ್ ಪಾಲ್ಗೊಂಡಿದ್ದಾನೆ. ಈ ವೇಳೆ ಮಾತನಾಡಿದ ಲಿಖಿತ್, ನಾನು ಚೆನ್ನಾಗಿ ಓದಬೇಕೆಂಬುದು ನನ್ನ ತಂದೆಯ ಆಸೆಯಾಗಿತ್ತು. ಅದನ್ನು ಪೂರೈಸಬೇಕೆಂಬ ಗುರಿಯೊಂದಿಗೆ ಪರೀಕ್ಷೆಗೆ ಹಾಜರಾಗಿದ್ದೇನೆ. ಪರೀಕ್ಷೆಯನ್ನ ಚೆನ್ನಾಗಿ ಬರೆದಿದ್ದೇನೆ ಎಂದಿದ್ದಾನೆ. ಅಪ್ಪನ ಸಾವಿನ ನೋವಿನಲ್ಲೂ ಪರೀಕ್ಷೆ ಬರೆದ ಲಿಖಿತ್ ಬಗ್ಗೆ ಸರ್ಕಾರಿ ಪದವಿ ಪೂರ್ವ ಕಾಲೇಜು ವಿಭಾಗದ ಪ್ರೌಢಶಾಲಾ ಮುಖ್ಯಶಿಕ್ಷಕಿ ರೇಖಾ ಕೊಟ್ರೇಶ್, ದುಃಖದಲ್ಲಿದ್ದರೂ ಕೂಡ ಸ್ಥಿತಪ್ರಜ್ಞತೆಯಿಂದ ಪರೀಕ್ಷೆ ಬರೆದ ಲಿಖಿತ್ ಸ್ಥೈರ್ಯ ಮೆಚ್ಚುವಂತದ್ದು ಎಂದಿದ್ದಾರೆ.

- Advertisement -
spot_img

Latest News

error: Content is protected !!